ಸಂತೋಷ್‌ ಶ್ರೀಕಂಠಪ್ಪ ನಿರ್ದೇಶನದ ‘ಖಾಸಗಿ ಪುಟಗಳು’ ಚಿತ್ರದ ‘ಅರೆಘಳಿಗೆ’ ವೀಡಿಯೋ ಸಾಂಗ್‌ ರಿಲೀಸ್‌ ಆಗಿದೆ. ಕೆ.ಕಲ್ಯಾಣ್ ರಚನೆಯ ಗೀತೆಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ರಘು ರಾಮ್ ಮತ್ತು ಸುನಿಧಿ ಹಾಡಿದ್ದಾರೆ.

ಹೊಸ ಪ್ರತಿಭೆಗಳು ರೂಪಿಸುತ್ತಿರುವ ‘ಖಾಸಗಿ ಪುಟಗಳು’ ಸಿನಿಮಾದ ಮತ್ತೊಂದು ವೀಡಿಯೋ ಸಾಂಗ್‌ ‘ಅರೆಘಳಿಗೆ’ ಬಿಡುಗಡೆಯಾಗಿದೆ‌. ಕೆ.ಕಲ್ಯಾಣ್ ರಚನೆಯ ಗೀತೆಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ರಘು ರಾಮ್ ಮತ್ತು ಸುನಿಧಿ ಹಾಡಿದ್ದಾರೆ. ಮುದ್ದಾದ ಜೋಡಿಯ ನಡುವಿನ ರೊಮ್ಯಾಂಟಿಕ್ ಗೀತೆ ಇದಾಗಿದ್ದು, ‘Paramvah Music’ನಲ್ಲಿ ಸಾಂಗ್‌ ಬಿಡುಗಡೆಯಾಗಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ತ್ರಿಲೋಕ್ ತ್ರಿವಿಕ್ರಮ್‌ ಬರೆದ ಹಾಡು ‘ಮುದ್ದು ಮುದ್ದಾಗಿ’ ಸಿನಿಪ್ರಿಯರನ್ನು ರಂಜಿಸಿತ್ತು. ಮಂಜು ವಿ. ರಾಜ್‌, ವೀಣಾ ವಿ. ರಾಜ್‌, ಮಂಜುನಾಥ್‌ ಡಿ.ಎಸ್‌. ನಿರ್ಮಾಣದ ‘ಖಾಸಗಿ ಪುಟಗಳು’ ಮೇ ತಿಂಗಳಲ್ಲಿ ತೆರೆಕಾಣಲಿದೆ. ಸಂತೋಷ್‌ ಶ್ರೀಕಂಠಪ್ಪ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ವಿಶ್ವ ಮತ್ತು ಶ್ವೇತಾ ಡಿಸೋಜಾ ಅಭಿನಯಿಸಿದ್ದಾರೆ. ಚೇತನ್‌ ದುರ್ಗಾ, ನಂದಕುಮಾರ್‌, ಶ್ರೀಧರ್ ,ನಿರೀಕ್ಷಾ ಶೆಟ್ಟಿ, ಪ್ರಶಾಂತ್ ನಟನ ಇತರೆ ಪ್ರಮುಖ ಪಾತ್ರಧಾರಿಗಳು. ವಿಶ್ವಜಿತ್‌ ರಾವ್‌ ಛಾಯಾಗ್ರಹಣ, ಆಶಿಕ್‌ ಕುಸುಗೊಳಿ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here