ನೆಟ್‌ಫ್ಲಿಕ್ಸ್‌ನ ‘Guns & Gulaabs’ ವೆಬ್‌ ಸರಣಿ ತಂಡಕ್ಕೆ TJ ಭಾನು ಸೇರ್ಪಡೆಯಾಗಿದ್ದು, ಅವರ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ. ದುಲ್ಕರ್‌ ಸಲ್ಮಾನ್‌, ರಾಜಕುಮಾರ್‌ ರಾವ್‌ ಮತ್ತು ಆದರ್ಶ್‌ ಗೌರವ್‌ ಸರಣಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ.

ರಾಜ್‌ ಮತ್ತು DK ನಿರ್ದೇಶನದ ನೆಟ್‌ಫ್ಲಿಕ್ಸ್‌ ವೆಬ್‌ ಸರಣಿ ‘Guns & Gulaabs’ ನಟಿ TJ ಭಾನು ಫಸ್ಟ್‌ಲುಕ್‌ ರಿವೀಲ್‌ ಆಗಿದೆ. ಈ ಹಿಂದೆ ಅವರು ‘The Forgotten Army – Azzadi Ke Liye’, ನೆಟ್‌ಫ್ಲಿಕ್ಸ್‌ ಆಂಥಾಲಜಿ ‘Ankahi Kahaniya”, ‘Vazhl’ ಪಾತ್ರಗಳಲ್ಲಿ ವೀಕ್ಷಕರಿಗೆ ಇಷ್ಟವಾಗಿದ್ದರು. ದುಲ್ಕರ್‌ ಸಲ್ಮಾನ್‌, ರಾಜಕುಮಾರ್‌ ರಾವ್‌ ಮತ್ತು ಆದರ್ಶ್‌ ಗೌರವ್‌ ನಟಿಸುತ್ತಿರುವ ‘Guns & Gulaabs’ ಸರಣಿಯಲ್ಲಿ TJ ಭಾನು ಅವರು ‘ಚಂದ್ರಲೇಖ’ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಫಸ್ಟ್‌ಲುಕ್‌ ಶೇರ್‌ ಮಾಡಿರುವ ನಟಿ, ಸರಣಿ ಅವಕಾಶದ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದಾರೆ.

“Finally, I can speak about what I was not supposed to. My first @Netflix series #GunsAndGulaabs. Here is the 1st look of my Character _CHANDRALEKHA” ಎಂದು ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ ಭಾನು. ತಿಳಿಹಾಸ್ಯ ಮತ್ತು ಕ್ರೈಂ – ಡ್ರಾಮಾ ಜಾನರ್‌ನ ಸರಣಿಯಲ್ಲಿ ತೊಂಬತ್ತರ ದಶಕದ ಕಾಲಘಟ್ಟವನ್ನು ಹಿಡಿದಿಡಲಿದ್ದಾರೆ ನಿರ್ದೇಶಕರು. ನಿರ್ಮಾಪಕರು ಕೆಲವು ದಿನಗಳ ಹಿಂದೆ ಸರಣಿಯಲ್ಲಿನ ಮೂವರು ಪ್ರಮುಖ ನಟರ ಫಸ್ಟ್‌ಲುಕ್‌ ಹಂಚಿಕೊಂಡಿದ್ದರು. ಯುವ ನಟ-ನಟಿಯರ ‘Guns & Gulaabs’ ಸರಣಿಯನ್ನು ವೀಕ್ಷಕರು ಕುತೂಹಲದಿಂದ ಎದುರುನೋಡುತ್ತಿದ್ದಾರೆ.

Previous articleಹಿಂದಿ ಚಿತ್ರಸಾಹಿತಿ, ಕವಯಿತ್ರಿ ಮಾಯಾ ಗೋವಿಂದ್‌ ನಿಧನ
Next article‘ಅರೆಘಳಿಗೆ’ ಸಾಂಗ್‌ ಬಿಡುಗಡೆ; ಮೇ ತಿಂಗಳಲ್ಲಿ ‘ಖಾಸಗಿ ಪುಟಗಳು’ ತೆರೆಗೆ

LEAVE A REPLY

Connect with

Please enter your comment!
Please enter your name here