ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ‘ಮ್ಯಾಕ್ಸ್‌’ mass song ಬಿಡುಗಡೆಯಾಗಿದೆ. ಚಿತ್ರನಿರ್ದೇಶಕ ಅನೂಪ್‌ ಭಂಡಾರಿ ರಚನೆಯ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ಚೇತನ್ ಗಂಧರ್ವ ಮತ್ತು ಎಂ ಸಿ ಬಿಜ್ಜು ಹಾಗಿಗೆ ದನಿಯಾಗಿದ್ದಾರೆ.

ನಟ ಸುದೀಪ್‌ ಅವರಿಗಿಂದು (ಸೆಪ್ಟೆಂಬರ್‌ 2) ಹುಟ್ಟುಹಬ್ಬದ ಸಂಭ್ರಮ. ಬರ್ತ್‌ಡೇ ಸಡಗರಕ್ಕೆ ಅವರ ‘ಮ್ಯಾಕ್ಸ್‌’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದೆ. ಚಿತ್ರನಿರ್ದೇಶಕ ಅನೂಪ್‌ ಭಂಡಾರಿ ರಚನೆಯ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ಚೇತನ್ ಗಂಧರ್ವ ಮತ್ತು ಎಂ ಸಿ ಬಿಜ್ಜು ಹಾಗಿಗೆ ದನಿಯಾಗಿದ್ದಾರೆ. ಅದ್ಧೂರಿ ಮೇಕಿಂಗ್‌, ದೊಡ್ಡ ಸಂಖ್ಯೆಯ ಸಹ ನೃತ್ಯಗಾರರು ಪಾಲ್ಗೊಂಡಿರುವ ಹಾಡು ಮಾಸ್‌ ಆಗಿದೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿ ತಯಾರಾಗಿರುವ ಚಿತ್ರವನ್ನು ವಿಜಯ್‌ ಕಾರ್ತಿಕೇಯ ನಿರ್ದೇಶಿಸಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here