ನಾಗಶೇಖರ್‌ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‌ ಜೋಡಿಯಾಗಿ ನಟಿಸುತ್ತಿರುವ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ.

ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‌ ನಟನೆಯ ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ನಾಗಶೇಖರ್‌ ನಿರ್ದೇಶನದಲ್ಲಿ 2011ರ ಏಪ್ರಿಲ್‌ನಲ್ಲಿ ತೆರೆಕಂಡಿದ್ದ ‘ಸಂಜು ವೆಡ್ಸ್‌ ಗೀತಾ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ ರಮ್ಯ ನಟಿಸಿದ್ದರು. ಈಗ ಪಾರ್ಟ್‌ 2ನಲ್ಲಿ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್‌ ಜೊತೆಯಾಗಿದ್ದಾರೆ. ಮೊದಲ ಪಾರ್ಟ್‌ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತು ಮತ್ತು ಚಿತ್ರದ ಹಾಡುಗಳು ಜನಪ್ರಿಯವಾಗಿದ್ದವು. ಟೀಸರ್‌, ಪ್ರೀತಿ ತುಂಬಿದ ಜೋಡಿಯ ಮೋಹಕ ಪ್ರಣಯದ ದೃಶ್ಯವನ್ನೊಳಗೊಂಡಿದೆ. ಜೊತೆಗೆ ಈ ಚಿತ್ರದ ಮೊದಲ ಭಾಗದ ರಮ್ಯ ಅವರ ಧ್ವನಿ ‘ಸಂಜು I love you’ ಎಂಬುದು ಮರುಕಳಿಸಿದೆ. ಇದರಿಂದಾಗಿ ರಮ್ಯಾ ಅವರು ಈ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆಗಳು ಮೂಡುತ್ತವೆ.

ಸಿನಿಮಾದಲ್ಲಿ ಕಿಟ್ಟಿ ಮತ್ತು ರಚಿತಾ ಅವರ ಪಾತ್ರಕ್ಕೆ ವಿಶೇಷ ಮೆರುಗು ನೀಡಲಾಗಿದ್ದು ಈ ಎರಡು ಪಾತ್ರಗಳ ಕಥೆಯನ್ನು ಚಿತ್ರೀಕರಿಸಲು ಚಿತ್ರತಂಡ 30 ದಿನ ಮುಂಬೈಗೆ ಇನ್ನೂ 30 ದಿನ ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲಿದೆ. ಚಿತ್ರಕ್ಕೆ ಸತ್ಯಾ ಹೆಗ್ಡೆ ಛಾಯಾಗ್ರಹಣ, ಇಮ್ರಾನ್‌ ಸರ್ದಾರಿಯಾ ಕೋರಿಯೋಗ್ರಫಿ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಇರಲಿದೆ. ಸಿನಿಮಾದ ಚಿತ್ರೀಕರಣದ ಮುಂಚೆಯೇ ಟೀಸರ್‌ ಬಿಡುಗಡೆಯಾಗಿರುವುದು ವಿಶೇಷ. ಈ ಸಿನಿಮಾ ಮತ್ತೊಂದು ಭಾವ ತೀವ್ರತೆಯ ಕಥೆ ಎನಿಸುತ್ತದೆ. ಚಿತ್ರದ ಶೀರ್ಷಿಕೆಯಲ್ಲಿಯೇ ‘ರಕ್ತದ ಮುದ್ರೆ’ ಒತ್ತುವುದರಿಂದ ಇದು ಮತ್ತೊಂದು ಕೇಸ್ ಸ್ಟೋರಿ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕು.

Previous article‘ಟಗರು ಪಲ್ಯ’ ಟೈಟಲ್‌ ಟ್ರ್ಯಾಕ್‌ | ಧನಂಜಯ ನಿರ್ಮಾಣದ ಸಿನಿಮಾ ರಾಜ್ಯೋತ್ಸವಕ್ಕೆ ತೆರೆಗೆ
Next article‘ಫೈಟರ್‌’ ಮೋಷನ್‌ ಪೋಸ್ಟರ್‌ | ಹೃತಿಕ್‌ – ದೀಪಿಕಾ ನಟನೆಯ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here