ಸಿನಿಮಾ ವೀಕ್ಷಿಸಲು ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವುದು ಚಿತ್ರೋದ್ಯಮದ ಅಳಲು. ಈ ಹಿನ್ನೆಲೆಯಲ್ಲಿ ನಟ ಕಿರಣ್‌ ರಾಜ್‌ ಒಂದು ವೀಡಿಯೋ ಮಾಡಿದ್ದಾರೆ. ಸಿಂಗಲ್‌ಸ್ಕ್ರೀನ್‌ ಥಿಯೇಟರ್‌ವೊಂದರಲ್ಲಿ ವೀಡಿಯೋ ಚಿತ್ರಿಸಲಾಗಿದ್ದು, ಕಿರಣ್‌ ರಾಜ್‌ ಜನರನ್ನು ಥಿಯೇಟರ್‌ಗೆ ಕರೆಯುತ್ತಿರುವ ಈ ಕಾನ್ಸೆಪ್ಟ್‌ ಗಮನ ಸೆಳೆಯುತ್ತಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವುದು ಚಿತ್ರೋದ್ಯಮದ ಅಳಲು. ಈ ಆತಂಕ ದಿನೇ ದಿನೇ ಕಾಡುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲ, ಇತರೆ ಪ್ರಾದೇಶಿಕ ಭಾಷಾ ಚಿತ್ರಗಳಿಗೂ ಈ ಸಮಸ್ಯೆ ಎದುರಾಗಿದೆ. ಸಿನಿಮಾದವರು ಪ್ರೇಕ್ಷಕರನ್ನು ದೂರುತ್ತಿದ್ದರೆ, ಮತ್ತೊಂದೆಡೆ ಪ್ರೇಕ್ಷಕರು ಉತ್ತಮ ಸಿನಿಮಾಗಳು ಬರುತ್ತಿಲ್ಲ ಎನ್ನುತ್ತಿದ್ದಾರೆ. ಇದರ ಮಧ್ಯೆ ಓಟಿಟಿ, ಮೊಬೈಲ್‌, ಟೀವಿಯೇ ಸಾಕು ಎನ್ನುವವರು ಸಾಕಷ್ಟು ಮಂದಿ. ಈ ಹಿನ್ನೆಲೆಯಲ್ಲಿ ನಟ ಕಿರಣ್‌ ರಾಜ್‌, ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ಏಕೆ ನೋಡಬೇಕು ಎಂದು ಹೇಳುವ ಒಂದು ವೀಡಿಯೋ ಮಾಡಿದ್ದಾರೆ. ಅವರು ನಾಯಕನಟನಾಗಿ ಅಭಿನಯಿಸಿರುವ ‘ರಾನಿ’ ಸಿನಿಮಾ ಇದೇ ಆಗಸ್ಟ್‌ 30ಕ್ಕೆ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಅವರು ಇಂಥದ್ದೊಂದು ವೀಡಿಯೊ ಮೂಲಕ ಥಿಯೇಟರ್‌ಗೆ ಬರುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ರಾನಿ’ ಚಿತ್ರತಂಡದ ಈ ಸೃಜನಶೀಲ ಪ್ರಯತ್ನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

LEAVE A REPLY

Connect with

Please enter your comment!
Please enter your name here