ತೆಲುಗು ನಟ ನರೇಶ್‌ ಮತ್ತು ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್‌ ಅಭಿನಯದ ‘ಮತ್ತೆ ಮದುವೆ’ ತೆಲುಗು – ಕನ್ನಡ ದ್ವಿಭಾಷಾ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದು ನಟ ನರೇಶ್‌ ಅವರ ನಿರ್ಮಾಣದಲ್ಲೇ ತಯಾರಾಗಿರುವ ಸಿನಿಮಾ. ಪವಿತ್ರಾ ಲೋಕೇಶ್‌ ಮತ್ತು ತಮ್ಮ ಬದುಕು, ಪ್ರೀತಿಯ ಕತೆಯನ್ನೇ ನರೇಶ್‌ ಸಿನಿಮಾ ಮಾಡಿದ್ದಾರೆ! ಮೇ 26ಕ್ಕೆ ಸಿನಿಮಾ ತೆರೆಕಾಣಲಿದೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಈ ಪ್ರೀತಿಗೆ ನರೇಶ್ ಮೂರನೇ ಪತ್ನಿ ಅಡ್ಡಿಪಡಿಸಿದರು. ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು, ಮೈಸೂರು ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾ, ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳೋದು, ಜನ ಹೀಯಾಳಿಸೋದು, ನಟಿ ಪವಿತ್ರಾ ಲೋಕೇಶ್‌ ಕರ್ನಾಟಕ ಮೀಡಿಯಾ ಬಗ್ಗೆ ಕಿಡಿಕಾರುವುದು… ಈ ವಿಷಯಗಳೆಲ್ಲಾ ‘ಮತ್ತೆ ಮದುವೆ’ ಸಿನಿಮಾ ಟ್ರೈಲರ್‌ನಲ್ಲಿ ಪ್ರಸ್ತಾಪವಾಗಿವೆ. ತಮ್ಮ ರಿಯಲ್‌ ಲೈಫ್‌ ಘಟನೆಗಳನ್ನೇ ನರೇಶ್‌ ಸಿನಿಮಾ ಮಾಡಿದ್ದಾರೆ!

ವಿಜಯ ಕೃಷ್ಣ ಮೂವೀಸ್ ಬ್ಯಾನರ್‌ನಡಿ ನರೇಶ್ ನಿರ್ಮಾಣ ಮಾಡಿರುವ ಚಿತ್ರವನ್ನು ಎಂ ಎಸ್ ರಾಜು ನಿರ್ದೇಶಿಸಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಚಿತ್ರ ಎನ್ನುತ್ತಾರವರು. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಪ್ರವೀಣ್ ಯಂಡಮೂರಿ ಚಿತ್ರದ ಇತರೆ ಕಲಾವಿದರು. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ ಎನ್ ಬಾಲ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ. ಮೇ 26ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here