ಬಿಗ್‌ಬಾಸ್‌ ಖ್ಯಾತಿಯ ನಟಿ ತನಿಷಾ ಕುಪ್ಪಂಡ ತಮ್ಮ ಕುಪ್ಪಂಡ ಪ್ರೊಡಕ್ಷನ್ಸ್‌ನಡಿ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ‘ಕೋಣ’ ಎಂದು ಶೀರ್ಷಿಕೆ ಇಡಲಾಗಿದೆ. ಇದೊಂದು ಡಾರ್ಕ್‌ ಕಾಮಿಡಿ ಜಾನರ್‌ ಸಿನಿಮಾ. ಪ್ರೊಡಕ್ಷನ್ ಹೌಸ್‌ ಘೋಷಿಸಿರುವ ಸಂದರ್ಭದಲ್ಲಿ ಗ್ರೀಟಿಂಗ್‌ ಕಾರ್ಡ್‌ನಂತೆ ಟೀಸರ್‌ ರೂಪಿಸಿದ್ದೇವೆ ಎನ್ನುತ್ತಾರೆ ತನಿಷಾ.

ಕೋಮಲ್‌ ನಟನೆಯ ‘ಕೋಣ’ ಡಾರ್ಕ್‌ – ಕಾಮಿಡಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಬಿಗ್‌ಬಾಸ್‌ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ಸ್ನೇಹಿತರೊಡಗೂಡಿ ಕುಪ್ಪಂಡ ಪ್ರೊಡಕ್ಷನ್ಸ್‌ನಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಹಾಗೆ ನೋಡಿದರೆ ಚಿತ್ರಕ್ಕಿನ್ನೂ ಮುಹೂರ್ತ ನೆರವೇರಿಲ್ಲ. ಪ್ರೊಡಕ್ಷನ್‌ ಹೌಸ್‌ ಶುರು ಮಾಡಿದ್ದು, ಗ್ರೀಟಿಂಗ್‌ ಕಾರ್ಡ್‌ನಂತೆ ಟೀಸರ್‌ ರೂಪಿಸಿದ್ದೇವೆ ಎನ್ನುತ್ತಾರೆ ತನಿಷಾ. ಟೀಸರ್‌ನಲ್ಲಿ ಕೋಣ ಮತ್ತು ರೋಬೋಟ್‌ ಜೊತೆ ಕೋಮಲ್‌ ಕಾಣಿಸಿಕೊಂಡಿದ್ದಾರೆ. ಇದೊಂದು ವಿಶಿಷ್ಟ ಕಥಾನಕ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಕುರಿತು ಮಾತನಾಡುವ ಕೋಮಲ್‌, ‘ಇದು ಡಾರ್ಕ್ ಹ್ಯೂಮರ್ ಎಂದಿದ್ದಾರೆ. ಚಾರ್ಲಿ ಚಾಪ್ಲಿನ್‌ ಹೇಗೆ ಸಂಕಷ್ಟದಲ್ಲಿ ಜನರನ್ನು ನಗಿಸುತ್ತಾರೋ ಹಾಗೆ ಈ ಚಿತ್ರದ ಕತೆಯೂ ಇದೆ. ಮೂಢನಂಬಿಕೆ, ನನ್ನನ್ನು ಹೊಸ ರೀತಿಯಲ್ಲಿ ತೋರಿಸಲು ಉದ್ದೇಶಿಸಿರುವ ಅವರ ಆಲೋಚನೆ ಇಷ್ಟವಾಯ್ತು. ಕೋಣ ಟೀಸರ್‌ ನೋಡಿದಾಗ ಮಲಯಾಳಂ ಸಿನಿಮಾ ನೋಡಿದ ರೀತಿ ಆಯ್ತು’ ಎನ್ನುತ್ತಾರೆ. ಈ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ತೆರೆಕಾಣಲಿದೆ.

‘ಕೋಣ ಟೀಸರ್ ಸಕ್ಸಸ್‌ಫುಲ್ ಆಗಿ ಲಾಂಚ್ ಆಗಿರುವುದಕ್ಕೆ ನನ್ನ ತಂಡ ಕಾರಣ. ಕುಪ್ಪಂಡ ಪ್ರೊಡಕ್ಷನ್ಸ್‌ ಅಂತ ಯೋಚನೆ ಮಾಡಿದಾಗ ಆಲ್ಬಂ ಸಾಂಗ್ ಮಾಡೋಣ ಎನ್ನುವ ಐಡಿಯಾ ಬಂದಿತ್ತು. ಆದರೆ ನಾವು ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ. ನನಗೆ ಖುಷಿ ಇದೆ. ಕೋಮಲ್ ಸರ್ ಈ ಪ್ರಾಜೆಕ್ಟ್‌ನಲ್ಲಿರುವುದು ಖುಷಿ ತಂದಿದೆ’ ಎನ್ನುವುದು ನಿರ್ಮಾಪಕಿ ತನಿಷಾ ಅವರ ಮಾತು. ಕಾರ್ತೀಕ್‌ ಕಿರಣ್‌ ಸಂಕಲ್ಪ ಮತ್ತು ರವಿ ಕಿರಣ್‌ ಅವರು ಚಿತ್ರನಿರ್ಮಾಣದಲ್ಲಿ ತನಿಷಾ ಅವರಿಗೆ ಜೊತೆಯಾಗಿದ್ದಾರೆ. ನಿರ್ದೇಶಕ ಹರಿಕೃಷ್ಣ ಎಸ್‌ ಅವರು ನೈಜ ಘಟನೆ ಆಧರಿಸಿ ಸಿನಿಮಾಗೆ ಕತೆ ಮಾಡಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದರೆ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here