‘ಸಲಾಂ ಸೋಲ್ಜರ್‌ ದೇಶಕ್ಕೆ ನೀನೇ ಪವರ್‌’ ಎನ್ನುವ ಒಕ್ಕಣಿ ಇರುವ ಪುನೀತ್‌ ರಾಜಕುಮಾರ್‌ ಕೊನೆಯ ಸಿನಿಮಾ ‘ಜೇಮ್ಸ್‌’ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಪೋಸ್ಟರ್‌ ಶೇರ್‌ ಮಾಡಿದ್ದಾರೆ.

ಗಣರಾಜ್ಯೋತ್ಸವದ ನಿಮಿತ್ತ ನಟ ಪುನೀತ್‌ ರಾಜಕುಮಾರ್‌ ಅಭಿನಯದ ‘ಜೇಮ್ಸ್‌’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಪುನೀತ್‌ ಪ್ಯಾರಾ ಮಿಲಿಟರಿ ಆಫೀಸರ್‌ ಪಾತ್ರದಲ್ಲಿದ್ದು, ಚಿತ್ರ ದ ಕತೆಯ ಬಗ್ಗೆ ಕುತೂಹಲ ಮೂಡಿಸಿದೆ. ಇಂದು ಕಂಠೀರವ ಸ್ಟುಡಿಯೋದಲ್ಲಿನ ಪುನೀತ್‌ ರಾಜಕುಮಾರ್‌ ಸಮಾಧಿಯ ಬಳಿ ಅಭಿಮಾನಿಗಳಿಂದಲೇ ಪೋಸ್ಟರ್‌ ಅನಾವತರಣಗೊಂಡಿದೆ. ಗಣರಾಜ್ಯೋತ್ಸವದ ಅಂಗವಾಗಿ ಸೈನಿಕರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಪೋಸ್ಟರ್‌ ವಿನ್ಯಾಸಗೊಂಡಿದೆ. ಪುನೀತ್‌ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಇದು. ಅಗಲಿದ ನಟನ ನೆನಪಿನಲ್ಲಿ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ ಶೇರ್‌ ಮಾಡಿದ್ದಾರೆ.

ಚೇತನ್‌ ಕುಮಾರ್‌ ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರಗಳಲ್ಲಿ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜಕುಮಾರ್‌ ನಟಿಸಿದ್ದಾರೆ ಎನ್ನುವುದು ವಿಶೇಷ. ಎಲ್ಲವೂ ಅಂದುಕೊಂಡಂತೆಯೇ ಆದರೆ ಮಾರ್ಚ್‌ 17ರಂದು ಪುನೀತ್‌ ರಾಜಕುಮಾರ್‌ ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ. ಇನ್ನು ಪುನೀತ್‌ ಪಾತ್ರದ ಡಬ್ಬಿಂಗ್‌ ಕುರಿತಂತೆ ಚರ್ಚೆ ನಡೆಯುತ್ತಿದೆ. ಶೂಟಿಂಗ್‌ ಸಂದರ್ಭದ ಪುನೀತ್‌ ರಾಜಕುಮಾರ್‌ ಧ್ವನಿಯನ್ನೇ ಬಳಕೆ ಮಾಡಿಕೊಳ್ಳಲು ನಿರ್ದೇಶಕರು ನಿರ್ಧರಿಸಿದ್ದಾರೆ. ಶೂಟಿಂಗ್‌ ಸಂದರ್ಭದಲ್ಲಿ ರೆಕಾರ್ಡ್‌ ಮಾಡಿಕೊಂಡಿರುವ ಪುನೀತ್‌ ಧ್ವನಿಯನ್ನು ಪರಿಷ್ಕರಿಸಿ ಉತ್ತಮಗೊಳಿಸಿ ಬಳಕೆ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ.

Previous articleZEE5 ಸರಣಿ ‘ಅಭಯ್’ ಸೀಸನ್ 3ನಲ್ಲಿ ಖಳರಾಗಿ ವಿಜಯ್ ರಾಝ್, ರಾಹುಲ್ ದೇವ್
Next articleವಿಜಯ್ ದೇವರಕೊಂಡ ಜೊತೆ ಜಾಹ್ನವಿ ಕಪೂರ್‌; ಪುರಿ ಜಗನ್ನಾಥ್‌ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here