ಶಿವ ನಿರ್ದೇಶನದ ‘ಕಂಗುವ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹೀರೋ ಸೂರ್ಯ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಈ ಟೀಸರ್‌ ರಿಲೀಸ್‌ ಮಾಡಿದೆ. ಸೂರ್ಯ ವೃತ್ತಿಬದುಕಿನ ಮಹತ್ವದ ಚಿತ್ರವಿದು. ಮುಂದಿನ ವರ್ಷ ಮೂಲ ತಮಿಳು ಸೇರಿದಂತೆ ಹತ್ತು ಭಾಷೆಗಳಲ್ಲಿ 3D ಫಾರ್ಮ್ಯಾಟ್‌ನಲ್ಲಿ ಸಿನಿಮಾ ತೆರೆಕಾಣಲಿದೆ.

ನಿನ್ನೆ ನಟ ಸೂರ್ಯ ಹುಟ್ಟುಹಬ್ಬದಂದು ಅವರ ಬಹುನಿರೀಕ್ಷಿತ ‘ಕಂಗುವ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಾನವೀಯ ಸಂಬಂಧಗಳ ಹಿನ್ನೆಲೆಯಲ್ಲಿ ಹೆಣೆದ ಫ್ಯಾಂಟಸಿ ಸಿನಿಮಾ ಎನ್ನುವುದು ಟೀಸರ್‌ನಿಂದ ತಿಳಿದುಬರುತ್ತದೆ. ವಿಶ್ಯುಯೆಲ್ಸ್‌ಗಳಲ್ಲಿ ಅತಿ ಹೆಚ್ಚು ಗ್ರಾಫಿಕ್ಸ್‌ ಬಳಕೆಯಾಗಿದ್ದು, ನಿರ್ದೇಶಕರು ಬೇರೆಯದ್ದೇ ಒಂದು ಜಗತ್ತನ್ನು ಕಟ್ಟಿಕೊಟ್ಟಿದ್ದಾರೆ. ನಿಸ್ಸಂಶಯವಾಗಿ ಸಾಹಸ ದೃಶ್ಯಗಳ ವೈಭವೀಕರಣ ಇರಲಿದೆ ಎನಿಸುತ್ತದೆ. ಕೊನೆಯಲ್ಲಿ ಕಾಣಿಸುವ ಹೀರೋ ಸೂರ್ಯ ಕೂಡ ವಿಲಕ್ಷಣ ಪಾತ್ರದಂತೆ ಚಿತ್ರಿತವಾಗಿದೆ. ಈ ಹಿಂದೆ ಮಹತ್ವದ ಚಿತ್ರಗಳನ್ನು ನಿರ್ಮಿಸಿರುವ ಕೆ ಇ ಜ್ಞಾನವೇಲ್‌ ನಿರ್ಮಾಣದ ಚಿತ್ರವಿದು.

ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಉತ್ಕೃಷ್ಟ ತಂತ್ರಜ್ಞಾನದ ಬಳಕೆ ಇರಲಿದೆ ಎನ್ನುವುದ ನಿರ್ದೇಶಕ ಅಂಬೋಣ. ಚಿತ್ರವನ್ನು ಏಕಕಾಲಕ್ಕೆ 10 ಭಾಷೆಗಳಲ್ಲಿ, 3Dಯಲ್ಲಿ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರದ್ದು. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ ಆರು ಭಾಷೆಗಳಲ್ಲಿ ಟೀಸರ್‌ ಬಿಡುಗಡೆಯಾಗಿದೆ. ಮುಂದಿನ ಕೆಲ ದಿನಗಳಲ್ಲಿ ಇನ್ನುಳಿದ ನಾಲ್ಕು ಭಾಷೆಗಳಲ್ಲಿ ಟೀಸರ್‌ ರಿಲೀಸ್‌ ಆಗಲಿದೆ. ಚಿತ್ರದಲ್ಲಿ ಭಾರತದ ವಿವಿಧ ಭಾಷೆಗಳ ಪ್ರಮುಖ ಕಲಾವಿದರು ಅಭಿನಯಿಸಲಿದ್ದಾರೆ. ಬಾಲಿವುಡ್‌ ನಟಿ ದಿಶಾ ಪಠಾಣಿ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ, ವೆಟ್ರಿ ಪಳನಿಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ.

Previous articleಕ್ರಿಸ್ಟೋಫರ್ ನೋಲನ್‌ನ ಅತೀ ಪ್ರಬುದ್ಧ ಚಿತ್ರ – Oppenheimer
Next articleಚಿತ್ರನಿರ್ದೇಶನಕ್ಕೆ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಭೂಷಣ್‌ | ‘ಫೋರ್ಸ್‌’ ವೀಡಿಯೋ ಬಿಡುಗಡೆ

LEAVE A REPLY

Connect with

Please enter your comment!
Please enter your name here