ಶ್ರೀನಿವಾಸರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಎರಡನೇ ಸಾಂಗ್‌ ರಿಲೀಸ್‌ ಆಗಿದೆ. ಕವಿರಾಜ್‌ ರಚನೆಯ ಈ ಹಾಡಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು, ಕೈಲಾಶ್‌ ಖೇರ್‌ ಮತ್ತು ಇಂದು ನಾಗರಾಜ್‌ ಹಾಡಿದ್ದಾರೆ. ಹಾಡಿಗೆ ಶೇಖರ್‌ ಮಾಸ್ಟರ್‌ ನೃತ್ಯ ಸಂಯೋಜನೆಯಿದೆ.

ಗಣೇಶ್‌ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಚಿನ್ನಮ್ಮ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಇದು ರಿಲೀಸ್‌ ಆಗುತ್ತಿರುವ ಚಿತ್ರದ ಎರಡನೇ ಹಾಡು. ಸಿನಿಮಾದಲ್ಲಿ ಒಟ್ಟು ಏಳು ಹಾಡುಗಳಿದ್ದು, ಮೈಸೂರಿನಲ್ಲಿ ಮೊದಲ ಸಾಂಗ್‌ ರಿಲೀಸ್‌ ಆಗಿತ್ತು. ಇದೀಗ ಎರಡನೇ ಸಾಂಗ್‌ ಹೊರಬಿದ್ದಿದೆ. ಕವಿರಾಜ್‌ ರಚನೆಯ ಈ ಹಾಡಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದು, ಕೈಲಾಶ್‌ ಖೇರ್‌ ಮತ್ತು ಇಂದು ನಾಗರಾಜ್‌ ಹಾಡಿದ್ದಾರೆ. ಹಾಡಿಗೆ ಶೇಖರ್‌ ಮಾಸ್ಟರ್‌ ನೃತ್ಯ ಸಂಯೋಜನೆಯಿದೆ. ಗಣೇಶ್‌ ಮತ್ತು ಮಾಳವಿಕಾ ನಾಯರ್‌ ಅವರ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ.

ಚಿತ್ರದ ಹೀರೋ ಗಣೇಶ್‌ ಅವರು ಮಾತನಾಡಿ, ‘ನಾನು ಬಹಳ ಇಷ್ಟಪಡುವ ಗೀತರಚನೆಕಾರರಾದ ಕವಿರಾಜ್ ರಚನೆಯ ಈ ‘ಚಿನ್ನಮ್ಮ’ ಹಾಡು ತುಂಬಾ ಚೆನ್ನಾಗಿದೆ. ಹಾಡನ್ನು ಪಿಕ್ಚರೈಸ್‌ ಮಾಡಿರುವ ಜಾಗವೂ ಸೊಗಸಾಗಿದೆ. ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ’ ಎನ್ನುತ್ತಾರೆ. ‘ಚಿತ್ರದಲ್ಲಿ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಏಳು ಹಾಡುಗಳಿದೆ. ಮೈಸೂರಿನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ‘ಚಿನ್ನಮ್ಮ’ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ’ ಎನ್ನುವುದು ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರ ಮಾತು. ತ್ರಿಶೂಲ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿರುವ ಚಿತ್ರವಿದು. ಗಣೇಶ್‌ ಅಭಿನಯದ 41ನೇ ಸಿನಿಮಾ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2024ರ ಆಗಸ್ಟ್‌ 15ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here