ಪ್ರಶಾಂತ್‌ ರಾಜ್‌ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ನಿರ್ದೇಶನದ ನೂತನ ರೊಮ್ಯಾಂಟಿಕ್‌ – ಕಾಮಿಡಿ ಸಿನಿಮಾ ಸೆಟ್ಟೇರಿದೆ. ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗಲಿರುವ ಚಿತ್ರದ ಮುಖ್ಯಭೂಮಿಕೆಯಲ್ಲಿ ಸಂತಾನಂ ಮತ್ತು ತಾನ್ಯಾ ಹೋಪ್‌ ನಟಿಸುತ್ತಿದ್ದಾರೆ.

ಆರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಮೂಲಕ ಸಿನಿಪ್ರಿಯರಿಗೆ ಪರಿಚಿತರಾಗಿರುವ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಪ್ರಶಾಂತ್ ಕನ್ನಡದ ಜೊತೆಗೆ ತಮಿಳಿನಲ್ಲೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನ ಕೊಂದಂಡರಾಮ ದೇಗುಲ ಆವರಣದಲ್ಲಿನ ಸಾಯಿಬಾಬಾ ಮಂದಿರದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಫಾರ್ಚುನ್ ಫಿಲ್ಮಂ ಬ್ಯಾನರ್‌ನಡಿ ತಯಾರಾಗಲಿರುವ ಸಿನಿಮಾದಲ್ಲಿ ತಮಿಳು ನಟ ಸಂತಾನಂ ನಾಯಕನಾಗಿ ನಟಿಸುತ್ತಿದ್ದು, ತಾನ್ಯಾ ಹೋಪ್ ನಾಯಕಿ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ನವೀನ್ ರಾಜ್ ಬಂಡವಾಳ ಹೂಡಿದ್ದಾರೆ.

ಇಂದಿನಿಂದ ಶೂಟಿಂಗ್ ಶುರು ಮಾಡಿರುವ ಪ್ರಶಾಂತ್ ರಾಜ್, ಫಸ್ಟ್ ಶೆಡ್ಯೂಲ್‌ ಬೆಂಗಳೂರಿನಲ್ಲಿ ಚಿತ್ರಿಸಲಿದ್ದಾರೆ. ಆನಂತರ ಚೆನ್ನೈ ಹಾಗೂ ವಿದೇಶದಲ್ಲಿ ಹಾಡು, ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಕರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಶಾಂತ್ ರಾಜ್ ಸಿನಿಮಾಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಅದರಂತೆ ಈ ಬಾರಿ ಪ್ರಶಾಂತ್ ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಜೊತೆ ಕೈಜೋಡಿಸಿದ್ದಾರೆ. ಪ್ರಶಾಂತ್ ನಿರ್ದೇಶನದ ಹೊಸ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಲಿದ್ದು, ಸುಧಾಕರ್ ಛಾಯಾಗ್ರಹಣ ಇರಲಿದೆ. ಸದ್ಯದಲ್ಲಿಯೇ ಚಿತ್ರದ ಇನ್ನಿತರೆ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ದೇಶಕರು.

Previous articleಕನ್ನಡ ’ರಾಜಕುಮಾರ’ನ ಮಹಾರಾಣಿ
Next article‘KGF2’ ಯಶಸ್ಸಿನ ಸುತ್ತ…

LEAVE A REPLY

Connect with

Please enter your comment!
Please enter your name here