ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ಲವ್‌ Mocktail2’ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಕಳೆದ ತಿಂಗಳು ಫೆಬ್ರವರಿ 11ರಂದು ಥಿಯೇಟರ್‌ಗೆ ಬಂದಿದ್ದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕೋವಿಡ್‌ ನಂತರದ ದಿನಗಳಲ್ಲಿ ತೆರೆಕಂಡು ಗೆಲುವು ಸಾಧಿಸಿದ ಚಿತ್ರಗಳ ಸಾಲಿನಲ್ಲಿ ‘ಲವ್‌ Mocktail2’ ಕೂಡ ಇದೆ. ಫೆಬ್ರವರಿ 11ರಂದು ತೆರೆಕಂಡ ಸಿನಿಮಾ ಐದು ವಾರಗಳ ನಂತರ ಓಟಿಟಿಗೆ ಬಂದಿದೆ. ನಿನ್ನೆ ಮಧ್ಯರಾತ್ರಿ 12ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇಂದಿಗೂ ರಾಜ್ಯದ ಸುಮಾರು 50 ಥಿಯೇಟರ್‌ಗಳಲ್ಲಿ ‘ಲವ್‌ Mocktail2’ ಪ್ರದರ್ಶನ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಸಿನಿಮಾ ಓಟಿಟಿಯಲ್ಲೂ ಸ್ಟ್ರೀಮ್‌ ಆಗುತ್ತಿರುವುದು ವಿಶೇಷ.

ಕೃಷ್ಣ ಮತ್ತು ಮಿಲನ ನಾಗರಾಜ್‌ ಜೋಡಿಯ 2020ರ ಹಿಟ್‌ ಸಿನಿಮಾ ‘ಲವ್‌ Mocktail’ ಸರಣಿಯಿದು. ಮೊದಲ ಚಿತ್ರದ ಯಶಸ್ಸಿನ ನಂತರ ಕೃಷ್ಣ ಮತ್ತು ಮಿಲನ ಸತಿಪತಿಯಾದರು. ಇವರ ನಿರ್ಮಾಣದಲ್ಲಿ ಸರಣಿ ಸಿನಿಮಾ ತೆರೆಗೆ ಬಂದಿತು. ಸರಣಿ ಚಿತ್ರದಲ್ಲಿ ರಚೆಲ್‌ ದೇವ್‌ ಹೊಸ ನಟನಾಗಿ ಚಿತ್ರತಂಡ ಸೇರಿಕೊಂಡರು. ಡಾರ್ಲಿಂಗ್‌ ಕೃಷ್ಣ ಅಭಿನಯದ ‘ಲೋಕಲ್‌ ಟ್ರೈನ್‌’, ‘ದಿಲ್‌ ಪಸಂದ್‌’, ‘ಲಕ್ಕೀ ಮ್ಯಾನ್‌’ ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ‘ಸುಗರ್‌ ಫ್ಯಾಕ್ಟರಿ’ ಮತ್ತು ‘ಲವ್‌ ಮಿ ಆರ್‌ ಹೇಟ್‌ ಮಿ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ಅವರ ತಾರಾಪತ್ನಿ ಮಿಲನ ನಾಗರಾಜ್‌ ಅವರು ‘For Regn.’ ಚಿತ್ರದಲ್ಲಿ ಪೃಥ್ವಿ ಅಂಬರ್‌ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here