ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಮತ್ತು ಕೀರ್ತಿ ಕಲ್ಕೆರೆ ಅಭಿನಯದ ‘ಓ ಮೈ ಲವ್‌’ ಸಿನಿಮಾದ ಚಿತ್ರೀಕರಣ ಗೋವಾದಲ್ಲಿ ನಡೆದಿದೆ. ಸ್ಮೈಲ್‌ ಶ್ರೀನು ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸುತ್ತಿರುವ ಲವ್‌ – ಆಕ್ಷನ್‌ ಚಿತ್ರವಿದು.

ಅತಿ ಹೆಚ್ಚು ಲೊಕೇಶನ್‌ಗಳಲ್ಲಿ ಚಿತ್ರೀಕರಣವಾಗುತ್ತಿರುವ ಸಿನಿಮಾ ಹೆಗ್ಗಳಿಕೆ ‘ಓ ಮೈ ಲವ್‌’ ಚಿತ್ರದ್ದು. ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಚಿತ್ರವೀಗ ಗೋವಾದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದೆ. ಅಲ್ಲಿನ ಸುಂದರ ಲೊಕೇಲ್‌ಗಳಲ್ಲಿ ಹಾಡನ್ನು ಚಿತ್ರಿಸಿದ್ದಾರೆ. ಜಿ.ರಾಮಾಂಜಿನಿ ನಿರ್ಮಿಸಿ, ಸ್ಮೈಲ್‌ ಶ್ರೀನು ನಿರ್ದೇಶಿಸುತ್ತಿರುವ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್‌ ಮತ್ತು ಕೀರ್ತಿ ಕಲ್ಕೆರೆ ಇದ್ದಾರೆ. ಸಾಧು ಕೋಕಿಲ, ಅಕ್ಷತ, ಸುಯೋಧ, ಟೆನ್ನಿಸ್ ಕೃಷ್ಣ ಚಿತ್ರದ ಇತರೆ ಪ್ರಮುಖ ಕಲಾವಿದರು. ಚಿತ್ರದ ಟೈಟಲ್ ಹಾಡನ್ನು ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಶೂಟ್ ಮಾಡಲಾಗಿದೆ. ಗೋವಾ ಚಿತ್ರೀಕರಣದೊಂದಿಗೆ ಶೂಟಿಂಗ್‌ ಪೂರ್ಣಗೊಂಡಿದ್ದು, ಮುಂದೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಚಾಲನೆ ಸಿಗಲಿದೆ.

ಚಿತ್ರಕ್ಕೆ ನಿರ್ಮಾಪಕರೇ ಕತೆ ರಚಿಸಿದ್ದಾರೆ ಎನ್ನುವುದು ವಿಶೇಷ. ‘ಬಳ್ಳಾರಿ ದರ್ಬಾರ್’ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ಸ್ಮೈಲ್‌ ಶ್ರೀನು ನಿರ್ದೇಶನದ ಲವ್‌ – ಆಕ್ಷನ್‌ ಸಿನಿಮಾ ಇದು. ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ತೆಲುಗು ಖಳನಟ ದೇವ್‌ ಗಿಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. “ಚಿತ್ರದ ಕತೆ ಹಾಗೂ ನಿರೂಪಣೆಗೆ ಪ್ರಾಮುಖ್ಯತೆ ನೀಡಿದ್ದೇನೆ. ಹೊಸಬರ ಜೊತೆ ಅನುಭವಿ ಕಲಾವಿದರೂ ಇದ್ದಾರೆ” ಎನ್ನುತ್ತಾರೆ ನಿರ್ದೇಶಕ ಸ್ಮೈಲ್‌ ಶ್ರೀನು. ಚರಣ್ ಅರ್ಜುನ್ ಸಂಗೀತ, ಹಾಲೇಶ್ ಎಸ್. ಛಾಯಾಗ್ರಹಣ, ರಿಯಲ್ ಸತೀಶ್ ಸಾಹಸ, ವಿ.ನಾಗೇಂದ್ರಪ್ರಸಾದ್ ಗೀತಸಾಹಿತ್ಯ, ವಿ.ಮುರಳಿ ನೃತ್ಯ ನಿರ್ದೇಶನ, ಡಿ.ಮಲ್ಲಿ ಸಂಕಲನ, ಜನಾರ್ದನ್ ಕಲಾ ನಿರ್ದೇಶನವಿದೆ.

Previous articleಬಿಡುಗಡೆಗೆ ಮುನ್ನವೇ ಡಿಜಿಟಲ್ ಹಕ್ಕು ಮಾರಾಟ; ದಿನೇಶ್‌ ಬಾಬು ‘ಕಸ್ತೂರಿ ಮಹಲ್’
Next articleOTTಗೆ ಬಂತು ‘ಲವ್‌ Mocktail2’; ಡಾರ್ಲಿಂಗ್‌ ಕೃಷ್ಣ ಸಿನಿಮಾ

LEAVE A REPLY

Connect with

Please enter your comment!
Please enter your name here