ರಾಹುಲ್ ಪಾಂಡೆ ನಿರ್ದೇಶನದ ‘ಮಾಮ್ಲಾ ಲೀಗಲ್ ಹೈ’ ನೆಟ್ಫ್ಲಿಕ್ಸ್ ಸರಣಿಯ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಿದೆ. ರವಿ ಕಿಶನ್, ನಿದಿ ಬಿಶ್ತ್, ಯಶಪಾಲ್ ಶರ್ಮಾ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರವಿ ಕಿಶನ್, ನಿಧಿ ಬಿಶ್ತ್ ಮತ್ತು ಯಶಪಾಲ್ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮಾಮ್ಲಾ ಲೀಗಲ್ ಹೈ’ ಹಿಂದಿ ಸರಣಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಕೋರ್ಟ್ ಜಾನರ್ ಹಾಸ್ಯ ಸರಣಿಯನ್ನು ರಾಹುಲ್ ಪಾಂಡೆ ನಿರ್ದೇಶಿಸಿದ್ದು, ಸೌರಭ್ ಖನ್ನಾ ಮತ್ತು ಕುನಾಲ್ ಅನೇಜಾ ಕಥೆ ಬರೆದಿದ್ದಾರೆ. ಸರಣಿಯಲ್ಲಿ ಅನಂತ್ ವಿ ಜೋಶಿ, ನೈಲಾ ಗ್ರೆವಾಲ್, ಅಂಜುಮ್ ಬಾತ್ರಾ ಮತ್ತು ವಿಜಯ್ ರಜೋರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೆಹಲಿಯ ಪಟ್ಪರಾಗಂಜ್ ಜಿಲ್ಲಾ ನ್ಯಾಯಾಲಯದಲ್ಲಿ ಈ ಕಾಲ್ಪನಿಕ ಹಾಸ್ಯ ಸರಣಿ ಜರುಗುತ್ತದೆ. ಸರಣಿಯು Netflix ನಲ್ಲಿ ಮಾರ್ಚ್ 1 ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಕಿಶನ್, ಸರಣಿಯಲ್ಲಿ ಭವಿಷ್ಯದಲ್ಲಿ ಭಾರತದ ಅಟಾರ್ನಿ ಜನರಲ್ ಆಗುವ ಕನಸು ಕಾಣುವ ಪಟ್ಪರ್ಗಂಜ್ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ವಿಡಿ ತ್ಯಾಗಿ ಪಾತ್ರದಲ್ಲಿ ನಟಿಸಿದ್ದಾರೆ. ಬಿಶ್ತ್, ಗ್ರೆವಾಲ್, ಬಾತ್ರಾ ಮತ್ತು ರಾಜೋರಿಯಾ ಅವರು (ಕಿಶನ್) ತ್ಯಾಗಿ ಅವರೊಂದಿಗೆ ಕೆಲಸ ಮಾಡುವ ಜೂನಿಯರ್ ವಕೀಲರಾಗಿ ನಟಿಸಿದ್ದಾರೆ. ಸರಣಿಯನ್ನು ಅಮಿತ್ ಗೋಲಾನಿ, ಬಿಸ್ವಪತಿ ಸರ್ಕಾರ್, ಸಮೀರ್ ಸಕ್ಸೇನಾ ಮತ್ತು ಖನ್ನಾ ನಿರ್ಮಿಸಿದ್ದಾರೆ.