ವಿ ಪ್ರಿಯಾ ನಿರ್ದೇಶನದ ನೂತನ ತಮಿಳು ಸಿನಿಮಾಗೆ ‘ಪೊನ್ ಒಂಡ್ರು ಕಂಡೇನ್’ ಎನ್ನುವ ಶೀರ್ಷಿಕೆ ನಿಗದಿಯಾಗಿದೆ. ಅಶೋಕ್ ಸೆಲ್ವನ್, ವಸಂತ್ ರವಿ ಮತ್ತು ಐಶ್ವರ್ಯ ಲಕ್ಷ್ಮಿ ನಟಿಸಲಿರುವ ತ್ರಿಕೋನ ಪ್ರೇಮಕತೆಯಿದು.

ಅಶೋಕ್ ಸೆಲ್ವನ್, ವಸಂತ್ ರವಿ ಮತ್ತು ಐಶ್ವರ್ಯ ಲಕ್ಷ್ಮಿ ‘ಪೊನ್ ಒಂಡ್ರು ಕಂಡೇನ್’ ತಮಿಳು ಚಿತ್ರದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಈ ಸಿನಿಮಾವನ್ನು ‘ಕಂಡ ನಾಳ್ ಮುಧಲ್’ ಸಿನಿಮಾ ಖ್ಯಾತಿಯ ವಿ ಪ್ರಿಯಾ ನಿರ್ದೇಶಿಸಲಿದ್ದಾರೆ. ಈ ಚಲನಚಿತ್ರ ರೊಮ್ಯಾಂಟಿಕ್ ಪ್ರೇಮಕತೆಯ ಜೊತೆಗೆ ಹಾಸ್ಯವನ್ನು ಒಳಗೊಂಡಿದೆ ಎನ್ನಲಾಗಿದ್ದು, ಬಾಣಸಿಗನಾಗಲು ಬಯಸುವ ಯುವಕನೊಬ್ಬನ ಸುತ್ತ ಚಿತ್ರಕಥೆ ಸುತ್ತುತ್ತದೆ. ಮದುವೆ ನಿಶ್ಚಯವಾದ ಯುವತಿಯೊಬ್ಬಳು ಮದುವೆಯಲ್ಲಿ ಆಸಕ್ತಿ ಇಲ್ಲದ ಕಾರಣ ಈ ಯುವಕನ ಸಹಾಯ ಪಡೆಯಲು ಮುಂದಾಗುತ್ತಾಳೆ. ನಂತರ ಇಬ್ಬರು ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ. ಮುಂದೆ ಅವರ ಬದುಕಿನಲ್ಲಿ ಏನೆಲ್ಲಾ ತಿರುವುಗಳು ಘಟಿಸುತ್ತವೆ ಎನ್ನುವುದು ಕಥಾವಸ್ತು. ಇದೊಂದು ತ್ರಿಕೋನ ಪ್ರೇಮಕಥಾ ಹಂದರವಾಗಿದ್ದು, ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರು ಸಂಗೀತ ಸಂಯೋಜಿಸಲಿದ್ದಾರೆ. ಹಾರರ್ ಥ್ರಿಲ್ಲರ್ ‘ಅಶ್ವಿನ್ಸ್’ (2023) ಚಿತ್ರದಲ್ಲಿ ನಟಿಸಿದ್ದ ವಸಂತ್ ರವಿ ‘ಜೈಲರ್’ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here