ರಾಹುಲ್‌ ಸದಾಶಿವನ್‌ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ಮಲಯಾಳಂ ಸಿನಿಮಾ ‘ಭ್ರಮಯುಗಂ’ ಟ್ರೇಲರ್‌ ಬಿಡುಗಡೆಯಾಗಿದೆ. ಮಮ್ಮೂಟಿ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅರ್ಜುನ್‌ ಅಶೋಕನ್‌, ಸಿದ್ದಾರ್ಥ್‌ ಭರತನ್‌, ಅಮಲ್ಡಾ ಲಿಜ್‌ ನಟಿಸಿದ್ದಾರೆ. ಸಿನಿಮಾ ಫೆಬ್ರವರಿ 15ರಂದು ತೆರೆಕಾಣಲಿದೆ.

ಮಮ್ಮೂಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭ್ರಮಯುಗಂ’ ಮಲಯಾಳಂ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ರಾಹುಲ್ ಸದಾಶಿವನ್ ನಿರ್ದೇಶನದ ಈ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್, ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಪ್ಪು-ಬಿಳುಪಿನ ಟ್ರೇಲರ್ ಅನೇಕ ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟಿದೆ. ಅರ್ಜುನ್‌ ಅಶೋಕನ್‌ ಗಾಬರಿ ವರ್ತನೆ ಕಾಣಬಹುದು. ಮಮ್ಮುಕಾ ತೀರಾ ನಿಗೂಢ ವ್ಯಕ್ತಿಯಂತೆ ಭಾಸವಾಗುತ್ತಾರೆ. ಉರುಳುವ ಎರಡು ದಾಳಗಳ ಮೇಲೆ ಇಡೀ ಕಥೆಯನ್ನು ಹೇಳಿದಂತಿದೆ. Night Shift Studios ಬ್ಯಾನರ್‌ ಅಡಿಯಲ್ಲಿ ರಾಮಚಂದ್ರ ಚಕ್ರವರ್ತಿ ಮತ್ತು ಎಸ್ ಶಶಿಕಾಂತ್ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರಕ್ಕೆ ಟಿಡಿ ರಾಮಕೃಷ್ಣನ್ ಸಂಭಾಷಣೆ ಬರೆದಿದ್ದು, ಶೆಹನಾದ್ ಜಲಾಲ್ ಛಾಯಾಗ್ರಹಣವಿದೆ. ಕ್ರಿಸ್ಟೋ ಕ್ಸೇವಿಯರ್ ಸಂಗೀತ ಸಂಯೋಜಿಸಿದ್ದಾರೆ.

‘The Age of Madness’ ಎಂಬ ಅಡಿಬರಹ ಹೊಂದಿರುವ ಈ ಚಿತ್ರದಲ್ಲಿ ನಟ, ನಿರ್ದೇಶಕ ಸಿದ್ಧಾರ್ಥ್ ಭರತನ್ ಮತ್ತು ‘ಕಮ್ಮಟ್ಟಿಪಾಡಂ’ ನಟಿ ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಫೆಬ್ರವರಿ 15ರಂದು ತೆರೆಕಾಣಲಿದೆ. ರಾಹುಲ್ ಸದಾಶಿವನ್ ಅವರು ಈ ಹಿಂದೆ ಶೇನ್ ನಿಗಮ್ ಮತ್ತು ರೇವತಿ ಅಭಿನಯದ ಥ್ರಿಲ್ಲರ್ ‘ಭೂತಕಾಲಂ’ ಚಿತ್ರವನ್ನು ನಿರ್ದೇಶಿಸಿದ್ದರು.

LEAVE A REPLY

Connect with

Please enter your comment!
Please enter your name here