ರಾಕಿ ಸೋಮ್ಲಿ ನಿರ್ದೇಶನದ ‘ಕೆಂಡದ ಸೆರಗು’ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮಾಲಾಶ್ರೀ. ತಮ್ಮ ಪಾತ್ರಕ್ಕೆ ಅವರು ಡಬ್ಬಿಂಗ್ ಮುಗಿಸಿದ್ದಾರೆ. ಕಾದಂಬರಿ ಆಧರಿಸಿ ನಿರ್ದೇಶಕರು ಚಿತ್ರಕಥೆ ಮಾಡಿದ್ದಾರೆ. ಇನ್ನೆರೆಡು ತಿಂಗಳಲ್ಲಿ ಸಿನಿಮಾ ತೆರೆಗೆ ಸಿದ್ಧವಾಗಲಿದೆ.
ನಟಿ ಮಾಲಾಶ್ರೀ ತಮ್ಮ ಪಾತ್ರಗಳಿಗೆ ಡಬ್ ಮಾಡುವುದು ವಿರಳ. ಇತ್ತೀಚೆಗೆ ಅವರು ಡಬ್ ಮಾಡುತ್ತಿದ್ದು, ‘ಕೆಂಡದ ಸೆರಗು’ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೆ. ರಾಕಿ ಸೋಮ್ಲಿ ನಿರ್ದೇಶನದ ‘ಕೆಂಡದ ಸೆರಗು’ ಕಾದಂಬರಿಯೊಂದನ್ನು ಆಧರಿಸಿದ ಸಿನಿಮಾ. ದೇಸಿ ಕಲೆ ಕುಸ್ತಿ ಹಿನ್ನೆಲೆಯಲ್ಲಿ ನಡೆಯುವ ಕತೆ. ಈ ಹಿಂದೆ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ್ದ ಮಾಲಾಶ್ರೀ, ‘ಕುಸ್ತಿ ಕತೆಯ ಚಿತ್ರದಲ್ಲಿ ಜೊತೆಗೆ ಭಾವನಾತ್ಮಕ ಕತೆಯಿದೆ. ಒಂದೊಂದು ಪಾತ್ರವೂ ವಿಶೇಷವಾಗಿದ್ದು, ಸಮಾಜಕ್ಕೆ ಸಂದೇಶವಿದೆ. ನಾನು ತುಂಬಾ ಖುಷಿಯಿಂದ, ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಖಂಡಿತವಾಗಿ ಇದು ಗೆಲ್ಲುವ ಸಿನಿಮಾ’ ಎಂದಿದ್ದರು.
ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಇನ್ನೆರೆಡು ತಿಂಗಳಲ್ಲಿ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ. ಚಿತ್ರದ ಟೀಸರ್ ಮತ್ತು ಒಂದು ಹಾಡು ಈಗಾಗಲೇ ರಿಲೀಸ್ ಆಗಿದೆ. ಯಶ್ ಶೆಟ್ಟಿ, ಭೂಮಿ ಶೆಟ್ಟಿ, ಸಿಂಧೂ ಲೋಕನಾಥ್, ವರ್ಧನ್, ಬಾಲರಾಜ್ ವಾಡಿ, ಶೋಭಿತಾ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಪಿನ್ ರಾಜ್ ಛಾಯಾಗ್ರಹಣ, ವೀರೇಶ್ ಕಬ್ಳಿ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಶ್ರೀಮುತ್ತು ಟಾಕೀಸ್ ಅಡಿ ಕೊಟ್ರೇಶ್ ಗೌಡ ಚಿತ್ರ ನಿರ್ಮಿಸಿದ್ದಾರೆ.