ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ. ಬೆಂಗಳೂರು ಸೀತಾ ಸರ್ಕಲ್ ಬಳಿಯ ಪ್ರಶಾಂತ್ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಶಿವರಾಂ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆ. ಮೂರು ದಿನಗಳ ಹಿಂದೆ ಅವರು ಬನಶಂಕರಿ ಬಡಾವಣೆಯಲ್ಲಿನ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಜೆ.ಪಿ.ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಸಿದು ಬಿದ್ದು ತಲೆಗೆ ಪೆಟ್ಟಾಗಿದ್ದುದರಿಂದ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ವೈದ್ಯರು ಚಿಕಿತ್ಸೆ ನಡೆಸಿದ್ದರು. ನಿನ್ನೆ ಕುಟುಂಬದವರು ಶಿವರಾಂ ಅವರನ್ನು ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಶಿವರಾಂ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. “ಅಪ್ಪ, ನಾವು ನಾಲ್ಕು ಮಕ್ಕಳು ಬನಶಂಕರಿಯಲ್ಲಿ ಒಂದೇ ಕಡೆ ನೆಲೆಸಿದ್ದೇವೆ. ಮಹಡಿಯಲ್ಲಿ ಅಪ್ಪ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಿಕೊಂಡಿದ್ದಾರೆ. ಪೂಜೆಗೆಂದು ತೆರಳಿದ ಅವರು ಅಲ್ಲೇ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿ ಚಿಕಿತ್ಸೆ ನಡೆಸಿದ್ದಾರೆ” ಎಂದು ಶಿವರಾಂ ಅವರ ಪುತ್ರ ಲಕ್ಷ್ಮೀಶ್ ತಿಳಿಸಿದ್ದಾರೆ.

Previous articleಟೀಸರ್ | YRF ಮೊದಲ ವೆಬ್ ಸರಣಿ ‘ದಿ ರೈಲ್ವೇ ಮೆನ್’; ಭೋಪಾಲ್ ಗ್ಯಾಸ್ ಟ್ರ್ಯಾಜಿಡಿ ಕಥಾನಕ
Next articleಪ್ರೀತಿಗೆ ಬೆಸುಗೆ ಹಾಕುವ ಅಡುಗೆ ಖಯಾಲಿ; SonyLIV ನಲ್ಲಿ ‘ಆಮಿಸ್’ ಅಸ್ಸಾಮಿ ಸಿನಿಮಾ

LEAVE A REPLY

Connect withPlease enter your comment!
Please enter your name here