ಭಾರತೀಯ ಸಿನಿಮಾರಂಗದ ಪ್ರತಿಭಾವಂತ ನಟ ಮಮ್ಮೂಟಿ ಇಂದು 72ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಅಂಗವಾಗಿ ಅವರ ‘ಭ್ರಮಯುಗಂ’ ಮಲಯಾಳಂ ಸಿನಿಮಾದ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ರಾಹುಲ್‌ ಸದಾಶಿವನ್‌ ನಿರ್ದೇಶನದ ಚಿತ್ರದಲ್ಲಿ ಅವರು ಖಳಛಾಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮೇರು ಚಿತ್ರನಟ ಮಮ್ಮೂಟಿ ಅವರ ಹುಟ್ಟುಹಬ್ಬವಿಂದು (ಸೆಪ್ಟೆಂಬರ್‌ 7). ಬರ್ತ್‌ಡೇ ನಿಮಿತ್ತ ‘ಭ್ರಮಯುಗಂ’ ಚಿತ್ರತಂಡ ಚಿತ್ರದಲ್ಲಿನ ಅವರ ಲುಕ್‌ ಬಿಡುಗಡೆ ಮಾಡಿದೆ. ರಾಹುಲ್‌ ಸದಾಶಿವನ್‌ ನಿರ್ದೇಶನದ ಹಾರರ್ ಥ್ರಿಲ್ಲರ್ ಚಿತ್ರವಿದು. ಕಲೆಯಾಗಿರುವ ಹಲ್ಲುಗಳು, ಬೂದುಬಣ್ಣದ ಗಡ್ಡ ಮತ್ತು ತಲೆಗೂದಲು, ವಿಕಟ ನಗೆಯ ಮಮ್ಮೂಟಿ ಪಾತ್ರ ವಿಶಿಷ್ಟವಾಗಿದೆ. ಚಿತ್ರದಲ್ಲಿ ಅವರು ಖಳಛಾಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ರೆಡ್ ರೈನ್’, ‘ಭೂತಕಾಲಂ’ ಖ್ಯಾತಿಯ ರಾಹುಲ್ ಸದಾಶಿವನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘The Age of Madness’ ಎಂಬ ಅಡಿಬರಹ ಹೊಂದಿರುವ ಈ ಚಿತ್ರದಲ್ಲಿ ನಟ, ನಿರ್ದೇಶಕ ಸಿದ್ಧಾರ್ಥ್ ಭರತನ್ ಮತ್ತು ‘ಕಮ್ಮಾಟ್ಟಿಪಾಡಂ’ ನಟಿ ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವು ಮೂಲ ಮಲಯಾಳಂ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಚಲನಚಿತ್ರದಲ್ಲಿ ಅರ್ಜುನ್ ಅಶೋಕನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣ ಆಗಸ್ಟ್ 17ರಿಂದ ಪ್ರಾರಂಭವಾಗಲಿದ್ದು, ಪ್ರೀ ಪ್ರೊಡಕ್ಷನ್‌ ಕೆಲಸಗಳು ಪ್ರಗತಿಯಲ್ಲಿವೆ. ಶೆಹನಾಜ್ ಜಲಾಲ್ ಛಾಯಾಗ್ರಹಣ, ಜ್ಯೋತಿಶ್ ಶಂಕರ್ ಸಂಕಲನ, ಮಹಮ್ಮದ್ ಅಲಿ ಸಂಗೀತ, ಕ್ರಿಸ್ಟೋ ಕ್ಸೇವಿಯರ್ ಸಂಭಾಷಣೆ ಸಿನಿಮಾಗೆ ಇರಲಿದೆ. ‘ವಿಕ್ರಮ್ ವೇದಾ’, ‘ಸಾಲಾ ಖಾಡೂಸ್’ ಮತ್ತು ‘ಮಂಡೇಲಾ’ ಮುಂತಾದ ಚಲನಚಿತ್ರಗಳಿಂದ ಖ್ಯಾತಿ ಪಡೆದಿರುವ ನಿರ್ಮಾಣ ಸಂಸ್ಥೆ YNOT ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

LEAVE A REPLY

Connect with

Please enter your comment!
Please enter your name here