ಅಭಿಲಾಶ್‌ ರೆಡ್ಡಿ ನಿರ್ದೇಶನದ ‘ಮಾ ನಾನ್ನ ಸೂಪರ್‌ ಹೀರೋ’ ತೆಲುಗು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸುಧೀರ್‌ ಬಾಬು ಮತ್ತು ಆರ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ತಂದೆ – ಮಗನ ಕತೆ ಹೇಳಿದ್ದಾರೆ ನಿರ್ದೇಶಕರು.

ಸುಧೀರ್‌ ಬಾಬು ಮತ್ತು ಆರ್ನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾ ನಾನ್ನ ಸೂಪರ್‌ ಹೀರೋ’ ತೆಲುಗು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಅಭಿಲಾಶ್‌ ರೆಡ್ಡಿ ಕನ್ಕಾ ನಿರ್ದೇಶನದ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಸಾಯಿ ಚಂದ್, ಸಯ್ಯಾಜಿ ಶಿಂಧೆ, ರಾಜು ಸುಂದರಂ, ಶಶಾಂಕ್, ಆಮಾನಿ, ಅನ್ನೀ ಇದ್ದಾರೆ. ಚಿತ್ರವು ಕುಟುಂಬದ ಪ್ರೀತಿ, ವಾತ್ಸಲ್ಯ, ಸಂಬಂಧಗಳ ಸಾರವನ್ನು ತಿಳಿಸಲಿದೆ. ಈ ಕತೆಯು ತಂದೆ ಮತ್ತು ಮಗನ ಹೃದಯಸ್ಪರ್ಶಿ ಭಾವನೆಗಳ ಸುತ್ತ ಸುತ್ತುವ ಕಥಾಹಂದರ. father’s dayದಂದು ಚಿತ್ರೀಕರಣದ ಮಾಹಿತಿ ಹಂಚಿಕೊಂಡಿದ್ದ ತಂಡ, ಈಗ ಶೂಟಿಂಗ್‌ ಪೂರ್ಣಗೊಳಿಸಿರುವ ಸುದ್ದಿಯನ್ನು ಟ್ವಿಟರ್‌ನಲ್ಲಿ ಫೋಟೊ, ವೀಡಿಯೋ ಮೂಲಕ ಹೇಳಿದೆ.

CAM Entertainment ಸಹಯೋಗದೊಂದಿಗೆ Celluloids ಬ್ಯಾನರ್‌ ಅಡಿಯಲ್ಲಿ ಸುನೀಲ್ ಬಲುಸು ಚಿತ್ರ ನಿರ್ಮಿಸುತ್ತಿದ್ದಾರೆ. ಸಮೀರ್ ಕಲ್ಯಾಣಿ ಛಾಯಾಗ್ರಹಣ, ಜಯ ಕ್ರಿಶ್ ಸಂಗೀತ ಸಂಯೋಜನೆ, ಅಭಿಲಾಷ್ ರೆಡ್ಡಿ ಅವರ ವೆಬ್ ಪ್ರಾಜೆಕ್ಟ್‌ಗಳಿಗೆ ಸಹ ಸಂಯೋಜಕರಾಗಿದ್ದ ಅನಿಲ್ ಕುಮಾರ್ ಪಿ ಅವರು ಚಿತ್ರದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಝಾನ್ಸಿ ಗೊಜಾಲ ನಿರ್ಮಾಣ ವಿನ್ಯಾಸ ಸಿನಿಮಾಗಿದೆ. ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಲಿದ್ದು, ಶೀಘ್ರ ರಿಲೀಸ್‌ ಮಾಡುವುದು ಚಿತ್ರತಂಡದ ಯೋಜನೆ.

LEAVE A REPLY

Connect with

Please enter your comment!
Please enter your name here