ಬಾಲಿವುಡ್‌ ನಟಿ ಮೊನಿಶಾ ಕೊಯಿರಾಲಾ ಇತ್ತೀಚೆಗೆ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಫೋಟೊವನ್ನು ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರು ನಟಿಸಿರುವ ‘ಹೀರಾ ಮಂಡಿ’ ವೆಬ್‌ ಸರಣಿ ಸ್ಟ್ರೀಮ್‌ ಆಗುತ್ತಿದೆ.

ನೇಪಾಳ ಮತ್ತು ಇಂಗ್ಲೆಂಡ್‌ನ ನೂರು ವರ್ಷಗಳ ಸ್ನೇಹದ ಸಂಕೇತವಾಗಿ ‘friendship treaty’ ಆಯೋಜನೆಗೊಂಡಿತ್ತು. ತಮ್ಮ ದೇಶ ನೇಪಾಳದ ಪ್ರತಿನಿಧಿಯಾಗಿ ಬಾಲಿವುಡ್‌ ನಟಿ ಮೊನಿಶಾ ಕೊಯಿರಾಲಾ ಇಂಗ್ಲೆಂಡ್‌ಗೆ ತೆರಳಿ ಪ್ರಧಾನಿ ರಿಷಿ ಸುನಕ್‌ ಅವರನ್ನು ಭೇಟಿ ಮಾಡಿದ್ದಾರೆ. Instagram ಖಾತೆಯಲ್ಲಿ ಈ ಬಗೆಗಿನ ಫೋಟೊ ಹಂಚಿಕೊಂಡಿರುವ ನಟಿ, ‘ಇಂಗ್ಲೆಂಡ್‌ ಪ್ರಧಾನಿಯವರನ್ನು ಭೇಟಿ ಮಾಡಿದ್ದು ಹೆಮ್ಮೆಯ ವಿಷಯ. ನಮ್ಮ ನೇಪಾಳದ ಬಗ್ಗೆ ಅವರು ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದರು. ಎವರೆಸ್ಟ್‌ ಬೇಸ್‌ ಕ್ಯಾಂಪ್‌ನಲ್ಲಿ ಟ್ರಕ್ಕಿಂಗ್‌ ಮಾಡುವಂತೆ ಅವರ ಕುಟುಂಬವನ್ನು ಆಹ್ವಾನಿಸಿದ್ದೇನೆ’ ಎಂದು ಬರೆದಿದ್ದಾರೆ.

ಮೊನಿಶಾ ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ ಹಲವರು ನಟಿಯ ಇತ್ತೀಚಿನ ವೆಬ್‌ ಸರಣಿ ‘ಹೀರಾಮಂಡಿ’ ಕುರಿತು ಮಾತನಾಡಿದ್ದಾರೆ. ಇದು ಮೊನಿಶಾಗೆ ತುಂಬಾ ಖುಷಿ ತಂದಿದೆ. ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಈ ಸರಣಿ ಸದ್ಯ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಮೊನಿಶಾ ಅವರು ಸರಣಿಯಲ್ಲಿ ಮಲ್ಲಿಕಾ ಜಾನ್‌ ಪಾತ್ರ ನಿರ್ವಹಿಸಿದ್ದಾರೆ. ನಟಿ ಮೊನಿಶಾ ಅವರು ಇತ್ತೀಚೆಗೆ ತಮ್ಮ Instagram ಖಾತೆಯಲ್ಲಿ ತಮ್ಮನ್ನು ಕಾಡಿದ ಕ್ಯಾನ್ಸರ್‌, ಇದರಿಂದ ಅವರು ಬಚಾವಾದ ಕುರಿತು ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿದ್ದರು. ‘ಹೀರಾಮಂಡಿ ನನ್ನ ವೃತ್ತಿಬದುಕಿನ ಪ್ರಮುಖ ಮೈಲುಗಲ್ಲು. 53ರ ಹರೆಯದ ನನ್ನ ವಯಸ್ಸಿಗೆ ಹೊಂದುವಂಥ ಅದ್ಭುತ ಪಾತ್ರವನ್ನು ನಿರ್ದೇಶಕರು ನೀಡಿದ್ದಾರೆ. ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕಂಟೆಂಟ್‌ ಆಧರಿಸಿದ ಪಾತ್ರಗಳ ನಿರೀಕ್ಷೆಯಲ್ಲಿರುವ ನಮಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತಿವೆ’ ಎಂದು ಮೊನಿಶಾ ಬರೆದಿದ್ದರು.

LEAVE A REPLY

Connect with

Please enter your comment!
Please enter your name here