ನಾಗ್‌ ಅಶ್ವಿನ್‌ ನಿರ್ದೇಶನದಲ್ಲಿ ಪ್ರಭಾಸ್‌ ನಟಿಸುತ್ತಿರುವ ‘ಕಲ್ಕಿ’ ತೆಲುಗು ಮತ್ತು ಹಿಂದಿ ದ್ವಿಭಾಷಾ ಸಿನಿಮಾದ ಕ್ಯಾರಕ್ಟರ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಭಾಸ್‌ ಪಾತ್ರದ ಹೆಸರು ‘ಭೈರವ’ ಎನ್ನುವುದು ರಿವೀಲ್‌ ಆಗಿದೆ. ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಬಹುಭಾಷಾ ಸಿನಿಮಾ ‘ಕಲ್ಕಿ 2898AD’ ದ್ವಿಭಾಷಾ ಸಿನಿಮಾದಲ್ಲಿನ ನಟ ಪ್ರಭಾಸ್‌ ‘ಭೈರವ’ ಪಾತ್ರದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಫಸ್ಟ್‌ಲುಕ್‌ ಮೂಲಕ ಗಮನಸೆಳೆದಿದ್ದ ಸಿನಿಮಾದ ಪೋಸ್ಟರ್‌ ಪ್ರಭಾಸ್‌ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ನಾಗ ಅಶ್ವಿನ್‌ ನಿರ್ದೇಶನದ ಸಿನಿಮಾ ಬಹುದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ಪ್ರಭಾಸ್‌ ಪಾತ್ರದ ಹೆಸರು ‘ಭೈರವ’ ಎನ್ನುವುದು ಈಗ ರಿವೀಲ್‌ ಆಗಿದೆ. ರಗಡ್‌ ಲುಕ್‌ನಲ್ಲಿರುವ ಪ್ರಭಾಸ್‌ ಭರಪೂರ ಆಕ್ಷನ್‌ ಪಾತ್ರಕ್ಕೆ ಮರಳುವ ಸೂಚನೆ ನೀಡಿದ್ದಾರೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಡಿ ತಯಾರಾಗುತ್ತಿರುವ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ ಎನ್ನುವುದು ವಿಶೇಷ.

ಪೋಸ್ಟರ್‌ನಲ್ಲಿ ಬೃಹತ್‌ ಫ್ಯಾಕ್ಟರಿಯೊಂದರಲ್ಲಿ ಪ್ರಭಾಸ್‌ ಕೂತಿದ್ದಾರೆ. ಕಣ್ಣಿಗೆ ವಿಚಿತ್ರ ಗ್ಲಾಸ್‌ ಧರಿಸಿ ನೆಲವನ್ನು ದಿಟ್ಟಿಸುತ್ತಿದ್ದಾರೆ. ಸಹಜವಾಗಿಯೇ ಈ ಪಾತ್ರ ಮತ್ತು ಸಿನಿಮಾ ಕುರಿತಾಗಿ ಸಿನಿಪ್ರಿಯರಲ್ಲಿ ಕುತೂಹಲ ಮೂಡುತ್ತದೆ. ಸಿನಿಮಾದಲ್ಲಿ ಪ್ರಭಾಸ್‌ ಜೊತೆಗೆ ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮೂಲ ತೆಲುಗು ಮತ್ತು ಹಿಂದಿ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಇಂಗ್ಲೀಷ್‌ ಸೇರಿ ಇನ್ನೂ ಕೆಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇದೇ ವರ್ಷದ ಮೇ 9ರಂದು ಕಲ್ಕಿ ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here