ಏಕ್ತಾ ಕಪೂರ್‌ ಒಡೆತನದ ALTBalaji ಓಟಿಟಿ ಪ್ಲಾಟ್‌ಫಾರ್ಮ್‌ 2021ರ ಮೂರನೇ ಕ್ವಾರ್ಟರ್‌ ಮತ್ತು ಒಂಬತ್ತು ತಿಂಗಳ (2021, ಡಿಸೆಂಬರ್‌ 31ರ ಅಂತ್ಯಕ್ಕೆ) ವಹಿವಾಟು ಘೋಷಿಸಿದೆ. ಒಂಬತ್ತು ತಿಂಗಳಲ್ಲಿ ಓಟಿಟಿಯ ನೇರ ಸಬ್‌ಸ್ಕ್ರಿಪ್ಶನ್‌ ವಹಿವಾಟು 45 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಭಾರತದ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಪೈಕಿ ALTBalaji ಯಶಸ್ವೀ ಕಂಟೆಂಟ್‌ ಕ್ರಿಯೇಟರ್‌ಗಳಲ್ಲೊಂದು. ಒಂಬತ್ತು ಹೊಸ ಶೋಗಳ ತಯಾರಿಕೆಯೊಂದಿಗೆ ಇದೀಗ ಅವರ ಕಂಟೆಂಟ್‌ ಲೈಬ್ರರಿ 89ಕ್ಕೂ ಹೆಚ್ಚು ಶೋಗಳ ಗಡಿ ತಲುಪಿದೆ. ಒಂಬತ್ತು ತಿಂಗಳಿಗೆ (2021ರ ಡಿಸೆಂಬರ್‌ 31ರ ಅಂತ್ಯಕ್ಕೆ) 3.48 ಮಿಲಿಯನ್‌ ಸಬ್‌ಸ್ಕ್ರಿಪ್ಶನ್‌ ಪಡೆದಿದ್ದು, ಇದರಲ್ಲಿ ಪಾರ್ಟ್ನರ್‌ App ಸಬ್‌ಸ್ಕ್ರಿಪ್ಶನ್‌ಗಳು ಸೇರ್ಪಡೆಯಾಗಿಲ್ಲ. 2021ರ ಥರ್ಡ್‌ ಕ್ವಾರ್ಟರ್‌ ಮತ್ತು ಒಂಬತ್ತು ತಿಂಗಳ (2021, ಡಿಸೆಂಬರ್‌ 31ರ ಅಂತ್ಯಕ್ಕೆ) ವಹಿವಾಟು ಘೋಷಿಸಿರುವ ALTBalaji ಬೆಳವಣಿಗೆಯ ಹಾದಿಯಲ್ಲಿ ಸ್ಥಿರತೆ ಕಾಣಬಹುದು. ಭಿನ್ನ ವಯೋಮಾನದ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಂಟೆಂಟ್‌ ತಯಾರಿಸುತ್ತಿರುವ ಪ್ಲಾಟ್‌ಫಾರ್ಮ್‌ ಓಟಿಟಿ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಸಾಬೀತು ಪಡಿಸುತ್ತಾ ಸಾಗಿದೆ.

ALTBalaji ಪ್ಲಾಟ್‌ಫಾರ್ಮ್‌ನಲ್ಲಿ 89ಕ್ಕೂ ಹೆಚ್ಚು ಶೋಗಳು ತಯಾರಾಗಿದ್ದು 2021ರ ಥರ್ಡ್‌ ಕ್ವಾರ್ಟರ್‌ನಲ್ಲಿ ಸ್ಟ್ರೀಮ್‌ ಆದ ‘ಗಿರ್ಗಿಟ್‌’ ಮತ್ತು ‘ಪವಿತ್ರ ರಿಶ್ತಾ 2’ ಶೋಗಳು ಜನಪ್ರಿಯತೆ ಗಳಿಸಿದವು. ಇದೇ ವೇಳೆ 72 ನಿಮಿಷಗಳಷ್ಟು ಎಂಗೇಜ್‌ಮೆಂಟ್‌ ಟೈಂ, 15.45 ಬಿಲಿಯನ್‌ ಮಿನಿಟ್ಸ್‌ ವಾಚ್‌ ಟೈಂ ದಾಖಲಾಗಿದೆ. ಒಂಬತ್ತು ತಿಂಗಳಲ್ಲಿ ನಾಲ್ಕು ಬ್ರಾಡ್‌ಕಾಸ್ಟರ್‌ಗಳಿಗೆ 618 ಗಂಟೆಗಳಷ್ಟು ಕಂಟೆಂಟ್‌ ತಯಾರಾಗಿದೆ. ಮೂರು ಹೊಸ ಶೋಗಳು ಲೈನ್‌ಅಪ್‌ ಆಗಿದ್ದು, ಸದ್ಯದಲ್ಲೇ ಸ್ಟ್ರೀಮ್‌ ಆಗಲಿವೆ. ನೇರವಾಗಿ ಓಟಿಟಿಗೆ ಸ್ಟ್ರೀಮ್‌ ಮಾಡುವ ಸಿನಿಮಾಗಳ ಅವಕಾಶಗಳಿಗೂ ALTBalaji ಎದುರು ನೋಡುತ್ತಿದೆ. ಈ ವ್ಯವಹಾರಕ್ಕೆ ಪೂರಕವಾಗಿ ಸಿನಿಮಾಗಳ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.

ಬಾಲಾಜಿ ಟೆಲಿಫಿಲ್ಮ್ಸ್‌ ಲಿಮಿಟೆಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೋಭಾ ಕಪೂರ್‌ ತಮ್ಮ ಸ್ಟೇಟ್‌ಮೆಂಟ್‌ನಲ್ಲಿ ಹೀಗೆ ಹೇಳುತ್ತಾರೆ – “ALTBalaji ದಿನಕಳೆದಂತೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಸಬ್‌ಸ್ಕ್ರಿಪ್ಶನ್‌ ಬೆಳೆಯುತ್ತಿದ್ದು, ಕಳೆದ ಒಂಬತ್ತು ತಿಂಗಳಲ್ಲಿ 3.48 ಮಿಲಿಯನ್‌ ಸಬ್‌ಸ್ಕ್ರಿಪ್ಶನ್‌ ಸೇರ್ಪಡೆಯಾಗಿದೆ. ಒಂಬತ್ತು ತಿಂಗಳಲ್ಲಿ 11 ಶೋಗಳನ್ನು ಸ್ಟ್ರೀಮ್‌ ಮಾಡಿದ್ದು, ಮುಂದಿನ ದಿನಗಳಿಗೆ ಉತ್ತಮ ಶೋಗಳು ಲೈನ್‌ ಅಪ್‌ ಆಗಿವೆ. ನಮ್ಮ ಕಂಟೆಂಟ್‌ ಶೇರಿಂಗ್‌ ಸ್ಟ್ರ್ಯಾಟಜಿ ಲಾಭದಾಯಕ ಬಿಸ್ನೆಸ್‌ಗೆ ಪೂರಕವಾಗಿ ಮುಂದುವರೆದಿದೆ. ಪ್ರೊಡಕ್ಷನ್‌ ಹವರ್ಸ್‌ಗೆ ಸಂಬಂಧಿಸಿದಂತೆ ನಮ್ಮ ಬಿಸ್ನೆಸ್‌ ಚೆನ್ನಾಗಿದ್ದು, ಮುಂದಿನ ದಿನಗಳಲ್ಲಿ ಆರಂಭವಾಗಲಿರುವ ಮೂರು ಶೋಗಳಲ್ಲೂ ಈ ಸ್ಟ್ರ್ಯಾಟಜಿ ಕಾಪಾಡಿಕೊಳ್ಳಲಿದ್ದೇವೆ. ಸಿನಿಮಾಗಳ ನಿರ್ಮಾಣ, ನೇರ OTT ಸ್ಟ್ರೀಮಿಂಗ್‌ ಕುರಿತಾಗಿ ಗಂಭೀರವಾಗಿ ತೊಡಗಿಸಿಕೊಂಡಿದ್ದೇವೆ. ALTBalaji ಒಟ್ಟಾರೆ ಬೆಳವಣಿಗೆಗೆ ನಮ್ಮ ನೀತಿ, ನಿಯಮಗಳು ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಯಶಸ್ಸನ್ನು ಎದುರು ನೋಡುತ್ತಿದ್ದೇವೆ”

ALTBalaji | ಬಾಲಾಜಿ ಟೆಲಿಫಿಲ್ಮ್ಸ್‌ ಲಿಮಿಟೆಡ್‌ನ ಓಟಿಟಿ ಪ್ಲಾಟ್‌ಫಾರ್ಮ್‌ ALTBalaji. ಹಿಂದಿ ಕಿರುತೆರೆಯ ಪ್ರಮುಖ ನಿರ್ಮಾಪಕಿ ಏಕ್ತಾ ಕಪೂರ್‌ 2017ರ ಏಪ್ರಿಲ್‌ 16ರಂದು ALTBalaji ಆರಂಭಿಸಿದರು. ನಿರಂತರ ಒರಿಜಿನಲ್‌ ಕಂಟೆಂಟ್‌ ತಯಾರಿಕೆಯೊಂದಿಗೆ ಇತರೆ ಮುಂಚೂಣಿ ಓಟಿಟಿಗಳಿಗೆ ಸ್ಪರ್ಧೆಯೊಡ್ಡಿದೆ. 32 ವಿವಿಧ ಇಂಟ್‌ಫೇಸಸ್‌ಗಳ ಮೂಲಕ ವೀಕ್ಷಕರಿಗೆ ಲಭ್ಯವಿದೆ. ಡ್ರಾಮಾ, ಕಾಮಿಡಿ, ರೊಮ್ಯಾನ್ಸ್‌, ಥ್ರಿಲ್ಲರ್‌, ಮಿಸ್ಟರಿ ಸೇರಿದಂತೆ ವಿವಿಧ ಜಾನರ್‌ನ ಕಂಟೆಂಟ್‌ಗಳ ಮೂಲಕ ವಿವಿಧ ವಯೋಮಾನದ ವೀಕ್ಷಕರನ್ನು ತಲುಪುತ್ತಿದೆ ALTBalaji. ಹಿಂದಿ ಸಿನಿಮಾರಂಗದ ಮುಂಚೂಣಿ ನಿರ್ದೇಶಕರು, ನಟ – ನಟಿಯರು ಈ ಪ್ಲಾಟ್‌ಫಾರ್ಮ್‌ನ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ನೂರು ಗಂಟೆಗಳಷ್ಟು ಮಕ್ಕಳ ಕಾರ್ಯಕ್ರಮ ALTBalaji ಕಂಟೆಂಟ್‌ ಬ್ಯಾಂಕ್‌ನಲ್ಲಿದ್ದು, ಬೆಂಗಾಳಿ, ಹಿಂದಿ, ಮರಾಠಿ, ಪಂಜಾಬಿ, ತಮಿಳು ಸೇರಿದಂತೆ ಇತರೆ ಭಾಷೆಗಳ ಕಂಟೆಂಟ್‌ ಕೂಡ ALTBalajiಯಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here