ಪಾಪ್‌ ಮ್ಯೂಸಿಕ್‌ ಜಗತ್ತಿನ ದಂತಕತೆ ಮೈಕಲ್‌ ಜಾಕ್ಸನ್‌ ಬಯೋಪಿಕ್‌ ಸಿನಿಮಾ ‘ಮೈಕಲ್‌’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಆಂಟೊಯಿನ್‌ ಫುಕ್ವಾ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಜಾಫರ್‌ ಜಾಕ್ಸನ್‌ ಕಾಣಿಸಿಕೊಳ್ಳುತ್ತಿದ್ದಾರೆ. 2025ರ ಏಪ್ರಿಲ್‌ 18ರಂದು ಸಿನಿಮಾ ತೆರೆಕಾಣಲಿದೆ.

ಮೈಕಲ್ ಜಾಕ್ಸನ್ ಬಯೋಪಿಕ್ ‘ಮೈಕಲ್‌’ ಇಂಗ್ಲೀಷ್‌ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಚಲನಚಿತ್ರವನ್ನು ಆಂಟೊಯಿನ್ ಫುಕ್ವಾ ನಿರ್ದೇಶಿಸುತ್ತಿದ್ದು, ಜಾನ್ ಲೋಗನ್ ಚಿತ್ರಕಥೆ ರಚಿಸಿದ್ದಾರೆ. ಮೈಕಲ್‌ ಜಾಕ್ಸನ್‌ ಅವರ ಸೋದರಳಿಯ ಜಾಫರ್ ಜಾಕ್ಸನ್ ಅವರು ಮೈಕಲ್‌ ಜಾಕ್ಸನ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಜಾಫರ್ ಜಾಕ್ಸನ್ ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದು, ‘The
Journey Starts Monday’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಕಪ್ಪು ಬಿಳುಪಿನ ಪೋಸ್ಟರ್‌ನಲ್ಲಿ ಮೈಕಲ್‌ ಜಾಕ್ಸನ್‌ ಅವರ ಸಿಗ್ನೇಚರ್‌ ಡ್ಯಾನ್ಸ್‌ ಸ್ಟೆಪ್‌ ತೋರಿಸಲಾಗಿದೆ. ಈ ಬಯೋಫಿಕ್‌ನಲ್ಲಿ ಮೈಕಲ್‌ ಅವರ ಜೀವನದ ಎಲ್ಲಾ ಅಂಶಗಳನ್ನು ಕೇಂದ್ರಿಕರಿಸಲಾಗುತ್ತದೆ. ಗಾಯಕನ ವಿರುದ್ಧ ಮಕ್ಕಳು ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಸಹ ಒಳಗೊಂಡಿರಲಿದೆ ಎಂದಿದ್ದಾರೆ ತಯಾರಕರು. ಈ ಚಿತ್ರವು ಏಪ್ರಿಲ್ 18, 2025ರಂದು ತೆರೆಗೆ
ಬರಲಿದೆ.

ಮೈಕೆಲ್ ಜೋಸೆಫ್ ಜಾಕ್ಸನ್ (ಆಗಸ್ಟ್ 29, 1958 – ಜೂನ್ 25, 2009) ಅಮೇರಿಕಾದ ಗಾಯಕ, ಗೀತರಚನೆಕಾರ, ಡ್ಯಾನ್ಸರ್‌, ನಿರ್ಮಾಪಕ ಮತ್ತು ಸಮಾಜ ಸೇವಕ. ಹೀಗೆ ಅವರು ಇತಿಹಾಸದಲ್ಲಿ ಶ್ರೇಷ್ಠ ಹಾಗೂ ಅತ್ಯಂತ ಪ್ರಭಾವಶಾಲಿ ಸಂಗೀತ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ನಾಲ್ಕು ದಶಕಗಳಲ್ಲಿ ಸಂಗೀತ, ನೃತ್ಯ ಮತ್ತು ಫ್ಯಾಷನ್‌ಗೆ ಅವರ ಕೊಡುಗೆಗಳು ಅಪಾರ. ಜಾಕ್ಸನ್ ಅವರು ಅನೇಕ ಸಂಗೀತ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ್ದರು. ವೇದಿಕೆಗಳ ಪ್ರದರ್ಶನಗಳಲ್ಲಿ ಅವರ ಮೂನ್‌ವಾಕ್ ಮತ್ತು ರೋಬೋಟ್‌ ಡ್ಯಾನ್ಸ್‌ಗಳು ಇಂದಿಗೂ ಅಚ್ಚಳಿದೆ ಉಳಿದಿವೆ. ಮೈಕಲ್ ಸಂಗೀತ ಇತಿಹಾಸದಲ್ಲಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಸಂಗೀತ ಕಲಾವಿದರಾಗಿದ್ದಾರೆ. ಅವರ ಪ್ರಭಾವ ಮತ್ತು ಖ್ಯಾತಿಯಿಂದಾಗಿ, ಅವರನ್ನು ‘King of Pop’ ಎಂದು ಕರೆಯಲಾಗುತ್ತದೆ.

LEAVE A REPLY

Connect with

Please enter your comment!
Please enter your name here