ತೆಲುಗು ನಟ ನಾಗಚೈತನ್ಯ OTT ಪದಾರ್ಪಣೆಗೆ ವೇದಿಕೆ ಸಜ್ಜಾಗಿದೆ. ಇದು ಹಾರರ್‌ – ಥ್ರಿಲ್ಲರ್‌ ಜಾನರ್‌ ಸರಣಿ ಎನ್ನಲಾಗಿದ್ದು, ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ವಿಕ್ರಮ್‌ ಕೆ. ಕುಮಾರ್‌ ನಿರ್ದೇಶನದ ತೆಲುಗು ವೆಬ್‌ ಸರಣಿ ಮೂಲಕ ನಾಗಚೈತನ್ಯ OTT ಪ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಈ ಸುದ್ದಿ ಇದೀಗ ಅಧಿಕೃತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಮೂಲಗಳ ಪ್ರಕಾರ ಸರಣಿ ಶೀರ್ಷಿಕೆ ‘ಧೂತ’ ಎಂದಾಗಲಿದೆ. ಇದು ಅವರಿಗೆ ಹೊಸ ಜಾನರ್‌. ಈ ಹಾರರ್‌ – ಥ್ರಿಲ್ಲರ್‌ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಇನ್ನು ತೆರೆಕಾಣಲಿರುವ ಅವರ ಮುಂದಿನ ಸಿನಿಮಾ ‘ಥ್ಯಾಂಕ್‌ ಯೂ’. ಈ ರೊಮ್ಯಾಂಟಿಕ್‌ – ಕಾಮಿಡಿ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ಚಿತ್ರದ ನಾಯಕಿ ರಾಶಿ ಖನ್ನಾ.

ಇತ್ತೀಚೆಗಷ್ಟೇ ನಾಗಚೈತನ್ಯ ‘ಥ್ಯಾಂಕ್‌ ಯೂ’ ಮಾಸ್ಕೋ ಶೂಟಿಂಗ್‌ ಮುಗಿದ ಸಂಭ್ರಮವನ್ನು, “And, that’s a wrap on #thankyouthefilm.. so much learning and fun working with these amazing people!! Can’t wait to share this journey with you all…,” ಎನ್ನುವ ಮೆಸೇಜ್‌ನೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದ್ದು ನಾಗ ಚೈತನ್ಯ ವೆಬ್‌ ಸರಣಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇನ್ನು ಈ ವರ್ಷ ನಾಗಚೈತನ್ಯ ‘ಲಾಲ್‌ ಸಿಂಗ್‌ ಛಡ್ಡಾ’ ಹಿಂದಿ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಮೀರ್‌ ಖಾನ್‌ ಅಭಿನಯದ ಸಿನಿಮಾ ಏಪ್ರಿಲ್‌ 14ರಂದು ತೆರೆಕಾಣಲಿದೆ.

Previous articleಸರ್ಕಾರಿ ಗೌರವಗಳೊಂದಿಗೆ ಲತಾಜೀ ಅಂತ್ಯಕ್ರಿಯೆ; ಗಮನ ಸೆಳೆದ ಶಾರುಖ್‌ – ಪೂಜಾ ಡಡ್ಲಾನಿ ಅಂತಿಮ ನಮನ
Next articleಇಸ್ರೇಲಿ ಗೂಢಾಚಾರನ ಬದುಕು-ಬವಣೆ ‘ದಿ ಸ್ಪೈ’

LEAVE A REPLY

Connect with

Please enter your comment!
Please enter your name here