ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ZEE5 ಓಟಿಟಿಗೆ ಬರುತ್ತಿದೆ. ಓಟಿಟಿ ರಿಲೀಸ್‌ಗೆಂದು ನೂತನ ಟ್ರೈಲರ್‌ ಬಿಡುಗಡೆಯಾಗಿದ್ದು, ನಟ ಜ್ಯೂನಿಯರ್‌ NTR ಬರ್ತ್‌ಡೇಗೆ ಸಿನಿಮಾ ಸ್ಟ್ರೀಮ್‌ ಆಗಲಿರುವುದು ವಿಶೇಷ.

ರಾಜಮೌಳಿ, ಜೂನಿಯರ್ NTR ಮತ್ತು ರಾಮ್ ಚರಣ್ ತೇಜಾ ಕಾಂಬಿನೇಷನ್ ಸಿನಿಮಾ ‘RRR’ ಓಟಿಟಿಯಲ್ಲಿ ಬರುತ್ತಿದೆ. ಈ ಚಿತ್ರದ ಬಾಕ್ಸ್‌ ಆಫೀಸ್‌ ವಹಿವಾಟು 1100 ಕೋಟಿ ರೂಪಾಯಿ. ರಾಮ್ – ಭೀಮ್ ಪವರ್‌ಫುಲ್‌ ಆಕ್ಷನ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಾರ್ಚ್ 24ರಂದು ರಿಲೀಸ್ ಆಗಿದ್ದ ಸಿನಿಮಾ ಬೆಳ್ಳಿತೆರೆಯಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಈಗ ಈ ಸಿನಿಮಾ ZEE5ಗೆ ಬರುತ್ತಿದೆ. ವಿಶೇಷವೆಂದರೆ ಜ್ಯೂನಿಯರ್‌ NTR ಹುಟ್ಟುಹಬ್ಬದ ದಿನವೇ, ಮೇ20ರಂದು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

‘RRR’ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಸ್ವತಃ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಡಬ್ ಮಾಡಿದ್ದರು. ಇದೀಗ ಸಿನಿಮಾ ZEE5ಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ಟ್ರೈಲರ್‌ ಅನ್ನು ನಟ ಶಿವ ರಾಜಕುಮಾರ್ ಅನಾವರಣ ಮಾಡಿದ್ದಾರೆ. ‘RRR’ ಯಶಸ್ವಿಯಾಗಿ ಐವತ್ತು ದಿನ ಕಂಪ್ಲೀಟ್ ಮಾಡಿದ್ದು, ಇದೇ‌ ಖುಷಿಯಲ್ಲಿರುವ ಚಿತ್ರತಂಡ OTT ಬಿಡುಗಡೆ ದಿನಾಂಕ ರಿವೀಲ್ ಮಾಡಿದೆ. 4K ಕ್ವಾಲಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Previous articleಸೆಟ್ಟೇರಿತು ‘ಅಶೋಕ ಬ್ಲೇಡ್‌’; ನೀನಾಸಂ ಸತೀಶ್‌ – ಕಾವ್ಯ ಶೆಟ್ಟಿ ಸಿನಿಮಾ
Next article‘777 ಚಾರ್ಲಿ’ ಟ್ರೈಲರ್‌;

LEAVE A REPLY

Connect with

Please enter your comment!
Please enter your name here