ಆರಿಫ್‌ ಅಲಿ ನಿರ್ದೇಶನದ ‘She’ ಸೀಸನ್‌ 2 ಸ್ಟ್ರೀಮಿಂಗ್‌ ದಿನಾಂಕವನ್ನು ನೆಟ್‌ಫ್ಲಿಕ್ಸ್‌ ಘೋಷಿಸಿದೆ. ಪ್ರಮುಖ ಪಾತ್ರದಲ್ಲಿ ಅದಿತಿ ಪೊಹಾಂಕರ್‌ ನಟಿಸಿದ್ದು, ಕನ್ನಡ ನಟ ಕಿಶೋರ್‌ ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ನಟಿಸಿದ್ದಾರೆ. ಶಿವಾನಿ ರಂಗೋಲ್‌, ಸ್ಯಾಮ್‌ ಮೋಹನ್‌, ಸುಹಿತಾ ಸರಣಿಯ ಇತರೆ ಪ್ರಮುಖ ಕಲಾವಿದರು.

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸರಣಿ ‘She’ ಎರಡನೇ ಸೀಸನ್‌ ಜೂನ್‌ 17ರಿಂದ ಸ್ಟ್ರೀಮ್‌ ಆಗಲಿದೆ. ಅದಿತಿ ಪಹಾಂಕರ್‌ ಸರಣಿಯಲ್ಲಿ ‘ಭೂಮಿಕಾ’ ಪಾತ್ರ ನಿರ್ವಹಿಸಿದ್ದಾರೆ. ಮುಂಬಯಿ ಕಾನ್‌ಸ್ಟೇಬಲ್‌ ಭೂಮಿಕಾ ಡ್ರಗ್‌ ರಾಕೆಟ್‌ ಎಕ್ಸ್‌ಪೋಸ್‌ ಮಾಡಲು ಅಂಡರ್‌ಕವರ್‌ ಆಗಿ ನಡೆಸುವ ಸಾಹಸ, ಈ ಸಂದರ್ಭದಲ್ಲಿನ ಡ್ರಾಮಾ ಸರಣಿಯ ವಸ್ತು. “PSA: Mark your calendars! #SHE is back in 9 days! Catch S2 of #SHE on 17th June, only on Netflix,” ಎನ್ನುವ ಸಂದೇಶದೊಂದಿಗೆ ನೆಟ್‌ಫ್ಲಿಕ್ಸ್‌ ಸರಣಿಯ ದಿನಾಂಕ ಅನೌನ್ಸ್‌ ಮಾಡಿದೆ. ಕನ್ನಡ ನಟ ಕಿಶೋರ್‌ ಡ್ರಗ್‌ ಕಿಂಗ್‌ಪಿನ್‌ ಪಾತ್ರದಲ್ಲಿದ್ದು, ವಿಶ್ವಾಸ್‌ ಕಿಣಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇಮ್ತಿಯಾಜ್‌ ಅಲಿ ನಿರ್ಮಾಣದ ಕ್ರೈಂ – ಡ್ರಾಮಾದ ಎರಡನೇ ಸೀಸನ್‌ ಅನ್ನು ಆರಿಫ್‌ ಅಲಿ ನಿರ್ದೇಶಿಸಿದ್ದಾರೆ. ಏಳು ಎಪಿಸೋಡುಗಳ ಸರಣಿಯ ಇತರೆ ಪ್ರಮುಖ ಪಾತ್ರಗಳಲ್ಲಿ ಶಿವಾನಿ ರಂಗೋಲ್‌, ಸ್ಯಾಮ್‌ ಮೋಹನ್‌, ಸುಹಿತಾ ನಟಿಸಿದ್ದಾರೆ. ‘She’ ಮೊದಲ ಸೀಸನ್‌ 2020ರ ಮಾರ್ಚ್‌ನಲ್ಲಿ ಸ್ಟ್ರೀಮ್‌ ಆಗಿತ್ತು.

Previous articleಮಹಾಭಾರತದ 21ನೇ ಶತಮಾನದ ಅವತರಣಿಕೆ ‘ಮಹಾಭಾರತ್ ಮರ್ಡರ್ಸ್’
Next articleIndo – UK ಸಾಂಸ್ಕೃತಿಕ ವೇದಿಕೆ ರಾಯಭಾರಿಯಾಗಿ ಎ.ಆರ್‌.ರೆಹಮಾನ್‌

LEAVE A REPLY

Connect with

Please enter your comment!
Please enter your name here