Netflix ರಿಯಾಲಿಟಿ ಶೋ ‘Social Currency’ ನಾಳೆ ಜೂನ್ 22ರಿಂದ ಸ್ಟ್ರೀಮ್ ಆಗಲಿದೆ. ಶೋನಲ್ಲಿ ಭಾರತದ ವಿವಿಧೆಡೆಯ ಎಂಟು Social media Influencers ಭಾಗವಹಿಸುತ್ತಿದ್ದಾರೆ. ಇವರು 21 ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕವಿಲ್ಲದೆ ಒಟ್ಟಿಗೆ ಇರಬೇಕು.
Netflixನ ವಿನೂತನ ವೆಬ್ ಸರಣಿ ‘Social Currency’ ನಾಳೆ ಜೂನ್ 22ರಿಂದ ಆರಂಭವಾಗುತ್ತಿದೆ. ಭಾರತದ ವಿವಿಧೆಡೆಯ ಎಂಟು Social media Influencers ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇದೊಂದು ರಿಯಾಲಿಟಿ ಶೋ ಆಗಿದ್ದು, 21 ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕವಿಲ್ಲದೆ ಒಟ್ಟಿಗೆ ಇರಬೇಕು. ಮೊಬೈಲ್ ಫೋನ್‌ಗಳನ್ನು ಬಳಸುವಂತಿಲ್ಲ ಹಾಗೂ ಯಾವುದೇ ಆನ್‌ಲೈನ್ ಸಂಪರ್ಕ ಇರುವುದಿಲ್ಲ. ಕೇವಲ ತಮ್ಮ ಬುದ್ದಿವಂತಿಕೆ ಮತ್ತು ದೈಹಿಕ ಶಕ್ತಿ ಬಳಸಿಕೊಂಡು ಶೋನಲ್ಲಿ ಸ್ಪರ್ಧಿಸಿ, ಪರಸ್ಪರ ಹೋರಾಡಬೇಕು. ಕೊನೆಯವರೆಗೂ ಸೆಣೆಸಾಡಿ ಗೆದ್ದ ಒಬ್ಬರು ಶೋನ ವಿಜೇತರು.
ಈ ವೆಬ್ ಶೋನಲ್ಲಿ ಪಾಲ್ಗೊಳ್ಳುತ್ತಿರುವ ಎಂಟು ಸೆಲೆಬ್ರೆಟಿ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ಸ್ ಮಾಹಿತಿ ನೋಡುವುದಾದರೆ – 1) ಸಾಕ್ಷಿ ಚೋಪ್ರಾ | ಚಿತ್ರನಿರ್ಮಾಪಕಿ ಮೀನಾಕ್ಷಿ ಸಾಗರ್ ಅವರ ಪುತ್ರಿ, ವೃತ್ತಿಯಲ್ಲಿ ಗಾಯಕಿ ಮತ್ತು ಗೀತರಚನಾಕಾರ್ತಿ ಹಾಗೂ ನಿರ್ಮಾಪಕಿ 2) ರೂಹಿ ದಿಲೀಪ್ ಸಿಂಗ್ | ಮಿಸ್ ಇಂಡಿಯಾ ಮಾಡೆಲ್, ಹಿಂದಿ ಕಿರುತೆರೆ ನಟಿ 3) ರೋವ್ಹಿ ರೈ | ಯೂಟ್ಯೂಬರ್, ಟಿಕ್‌ಟಾಕ್ ಸ್ಟಾರ್ 4) ಮೃದಲ್ ಮಹದೋಕ್ | ಮಾಡೆಲ್, ಟಿಕ್‌ಟಾಕರ್ 5) ಭವಿನ್ ಅಶ್ವಿನ್ ಭಾನುಶಾಲಿ | ‘ದೇ ದೇ ಪ್ಯಾರ್ ದೇ’, ‘ವೆಲ್ಲಪಂತಿ’ ಮತ್ತು ‘AI SHA : ಮೈ ವರ್ಚುಯೆಲ್ ಗರ್ಲ್‌ಫ್ರೆಂಡ್’ ಸಿನಿಮಾಗಳು ಮತ್ತು ಟಿವಿ ಶೋಗಳಲ್ಲಿನ ನಟಿಸಿದ್ದಾರೆ 6) ವಾಗ್ಮಿತಾ ಸಿಂಗ್ | ಸೋಷಿಯಲ್‌ಮಿಡಿಯಾ ಸೆಲೆಬ್ರೆಟಿ ಮತ್ತು ಸ್ಕ್ರೀನ್‌ರೈಟರ್ 7) ಆಕಾಶ್ ಮೆಹ್ತಾ | ಸ್ಟಾಂಡ್ ಅಪ್ ಕಮೆಡಿಯನ್, ಗೇಮರ್, ಬರಹಗಾರ, ಸಂಗೀತಗಾರ 8) ಪಾರ್ಥ್ ಲಘಟೆ (ಪಾರ್ಥ್ ಸಮತಾನ್) | ನಟ, ಮಾಡೆಲ್.
Netflix ಈ ಹಿಂದೆ ಕರಣ್ ಜೋಹರ್ ನಿರೂಪಣೆಯಲ್ಲಿ ‘What the Love!’, ‘Indian Matchmaking’, ‘Laava Ka Daava’ ಗೇಮ್ ಶೋಗಳನ್ನು ರೂಪಿಸಿತ್ತು. ಇದೀಗ ‘Social Currency’ ರಿಯಾಲಿಟಿ ಶೋ ಮೂಲಕ ವೀಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ. ಫಾಜಿಲಾ ಅಲ್ಲಾನಾ, ಕಾಮ್ನಾ ಮೆನೆಜಸ್, ಚಡ್ ಗ್ರೂಲಾಚ್, ಶಾನ್ವರಿ ಅಲಗ್ ನಾಯರ್, ಮೇಘನಾ ಬಡೋಲಾ ‘Social Currency’ ರೂಪಿಸಿದ್ದು, ಸಾಗರ್ ಮೋರ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. SOL ಪ್ರೊಡಕ್ಷನ್‌ನಿರ್ಮಾಣ ಮಾಡಿದೆ. ‘Social Currency’ ಸೀರೀಸ್‌ನ ಮೊದಲ ಎಪಿಸೋಡ್ ನಾಳೆ ಜೂನ್ 22ರಿಂದ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
Survival mode 🔛 Witness India’s top influencers battle for the crown of ultimate Social Influence 💪🏻🤳🏻#SocialCurrency, releasing on 22nd June, only on Netflix! pic.twitter.com/jI1SzkVjC0
— Netflix India (@NetflixIndia) June 15, 2023