‘ರೈಡರ್‌’ ನಂತರ ನಿಖಿಲ್‌ ಕುಮಾರ್‌ ನೂತನ ಸಿನಿಮಾ ಸೆಟ್ಟೇರಿದೆ. ‘ಮಾಸ್ಟರ್‌ಪೀಸ್‌’, ‘ಮಫ್ತಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಮಂಜು ಅಥರ್ವ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು.

ನಿಖಿಲ್‌ ಕುಮಾರ್‌ ನೂತನ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣವೂ ಜಾರಿಯಲ್ಲಿದೆ. ಮಂಜು ಅಥರ್ವ ಚಿತ್ರದ ನಿರ್ದೇಶಕ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿರುವ ಮಂಜು ಅಥರ್ವ, ತಮಿಳಿನ ಕದಿರನ್‌ ಅವರೊಂದಿಗೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದು, ಇತ್ತೀಚಿನ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಸಹನಿರ್ದೇಶಕರಾಗಿದ್ದರು. ಇದೀಗ ನಿಖಿಲ್‌ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದು ಅಕ್ಷನ್‌ – ಫ್ಯಾಮಿಲಿ ಎಂಟರ್‌ಟೇನರ್‌ ಎನ್ನುವ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಶೀರ್ಷಿಕೆಯಿನ್ನೂ ನಿಗದಿಯಾಗಿಲ್ಲ. ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ಸಿನಿಮಾ ನಿರ್ಮಿಸುತ್ತಿದ್ಧಾರೆ. ಅಜನೀಶ್ ಲೋಕನಾಥ್‌ ಸಂಗೀತ ಸಂಯೋಜನೆ, ಮಫ್ತಿ, ಮದಗಜ ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here