ಶ್ರೇಯಸ್‌ ಚಿಂಗಾ ನಟಿಸಿ, ನಿರ್ದೇಶಿಸಿರುವ ‘ಒನ್‌ ಅಂಡ್‌ ಹಾಫ್‌’ ಸಿನಿಮಾದ ಹಾಡೊಂದರ ಗ್ಲಿಂಪ್ಸ್‌ ಬಿಡುಗಡೆಯಾಗಿದೆ. ಇದೊಂದು ಕಾಮಿಡಿ ಜಾನರ್‌ ಸಿನಿಮಾ. ಚರಣ್‌ ನಿರ್ಮಾಣದ ಸಿನಿಮಾದ ನಾಯಕಿಯಾಗಿ ಮಾನ್ವಿತಾ ಹರೀಶ್‌ ನಟಿಸಿದ್ದಾರೆ.

‘ರಂಗ್‌ಬಿರಂಗಿ’, ‘ಡೆವಿಡ್’, ‘ದಿ ವೆಕೆಂಟ್ ಹೌಸ್’ ಸಿನಿಮಾಗಳಲ್ಲಿ ನಟಿಸಿದ್ದ ನಟ ಶ್ರೇಯಸ್ ಚಿಂಗಾ, ‘ಒನ್ ಅಂಡ್ ಹಾಫ್’ ಸಿನಿಮಾದೊಂದಿಗೆ ಮರಳುತ್ತಿದ್ದಾರೆ. ಚಿತ್ರದ ಹೀರೋ ಆಗಿ ನಟಿಸುತ್ತಿರುವ ಅವರು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಇದು ಸ್ವತಂತ್ರ ನಿರ್ದೇಶನದಲ್ಲಿ ಅವರ ಮೊದಲ ಸಿನಿಮಾ. ಶೂಟಿಂಗ್ ಮುಗಿಸಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ‘ಒನ್ ಅಂಡ್ ಹಾಫ್’ ಕಾಮಿಡಿ ಜಾನರ್ ಸಿನಿಮಾವಾಗಿದ್ದು, ಮನರಂಜನೆ ಪಕ್ಕ ಅನ್ನೋದು ಚಿತ್ರತಂಡದ ಭರವಸೆ. ಚಿತ್ರದ ಹೀರೋನ ಹೆಸರು ಕನ್ನಡ ಎಂದಿರುವುದು ವಿಶೇಷ. ಸಿನಿಮಾ ಬಗ್ಗೆ ಬಹಳಷ್ಟು ಪ್ಯಾಷನ್‌ ಇರುವ ಆರ್‌ ಚರಣ್‌ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಸಿನಿಮಾದ ಹಾಡೊಂದರ ಗ್ಲಿಂಪ್ಸ್‌ ಬಿಡುಗಡೆಯಾಗಿದೆ.

ಚಿತ್ರದ ನಾಯಕಿಯಾಗಿ ನಟಿಸಿರುವ ಮಾನ್ವಿತಾ ಹರೀಶ್‌, ‘ನನಗೆ ಇದು ಸ್ಪೆಷಲ್ ಸಿನಿಮಾ. ಈ ಸಿನಿಮಾ ಬಂದ ಮೇಲೆ ನನ್ನ ಲೈಫ್‌ಗೆ ಹೊಸ ವ್ಯಕ್ತಿ ಬಂದರು. ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಲಿಖಿತಾ ಸಿರಿ ನನ್ನ ಕೋಸ್ಟಾರ್. ನಮ್ಮ 3 ಜನಕ್ಕೂ ಒಳ್ಳೇ ಬಾಂಡಿಂಗ್ ಇತ್ತು. ಶ್ರೇಯಸ್ ಡೈರೆಕ್ಟರ್ – ಆಕ್ಟರ್ ಆಗಿ ಒಳ್ಳೆ ಕೆಲಸ ಮಾಡಿದ್ದಾರೆ’ ಎನ್ನುತ್ತಾರೆ. ‘ಇದು ತಂತ್ರಜ್ಞರ ಸಿನಿಮಾ. ಪ್ರತಿಯೊಬ್ಬ ತಂತ್ರಜ್ಞರೂ ಕೂಡ ಫ್ಯಾಮಿಲಿ ತರ. ಅವರು ಅವರ ಕರ್ತವ್ಯ ನಿರ್ವಹಿಸಿದ್ದಾರೆ’ ಎನ್ನುವುದು ನಿರ್ದೇಶಕ ಶ್ರೇಯಸ್‌ ಚಿಂಗಾ ಮಾತು. ಸಾಧು ಕೋಕಿಲಾ, ಅವಿನಾಶ್, ಸುಚೇಂದ್ರ ಪ್ರಸಾದ್, ‘ಸ್ಪರ್ಶ’ ರೇಖಾ, ಅನಂತು, ಸುಂದರಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವೇಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here