ಶ್ರೀನಿವಾಸರಾಜು ನಿರ್ದೇಶನದಲ್ಲಿ ಗಣೇಶ್‌ ಅಭಿನಯಿಸುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಸದ್ದಿಲ್ಲದೆ ಚಾಲನೆ ಸಿಕ್ಕಿದೆ. ಮಾಳವಿಕಾ ನಾಯರ್‌ ಚಿತ್ರದ ನಾಯಕಿ. ನಾಳೆ ಜುಲೈ 2ರ ಗಣೇಶ್‌ ಬರ್ತ್‌ಡೇ ಸಂಭ್ರಮಕ್ಕೆಂದು ಚಿತ್ರತಂಡ ಫಸ್ಟ್‌ಲುಕ್‌ ಬಿಡುಗಡೆ ಮಾಡಿದೆ.

ನಟ ಗಣೇಶ್‌ ಅವರ ನೂತನ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಸದ್ದಿಲ್ಲದೆ ಚಿತ್ರೀಕರಣ ನಡೆಸಿಕೊಳ್ಳುತ್ತಿದೆ. ಇದು ಗಣೇಶ್‌ ಅವರ 41ನೇ ಸಿನಿಮಾ. ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮಾಳವಿಕಾ ನಾಯರ್‌ ಚಿತ್ರದ ಹಿರೋಯಿನ್‌. ಇದೊಂದು ಕೌಟುಂಬಿಕ ಕಥಾಹಂದರದ ಸಿನಿಮಾ ಎಂದಷ್ಟೇ ಚಿತ್ರದ ಕುರಿತು ಮಾಹಿತಿ ಬಿಟ್ಟುಕೊಡುತ್ತಾರೆ ನಿರ್ದೇಶಕರು. ಮುಂದಿನ ದಿನಗಳಲ್ಲಿ ಮೈಸೂರು, ರಾಜಸ್ಥಾನ ಮತ್ತು ಯೂರೂಪ್‌ ದೇಶಗಳಲ್ಲಿ ಶೂಟಿಂಗ್‌ ನಡೆಸುವುದು ಚಿತ್ರತಂಡದ ಯೋಜನೆ. ನಾಳೆ ಜುಲೈ 2ರಂದು ಗಣೇಶ್‌ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಗಿಫ್ಟ್‌ ಆಗಿ ಚಿತ್ರತಂಡ ಫಸ್ಟ್‌ಲುಕ್‌ ಬಿಡುಗಡೆಗೊಳಿಸಿದೆ. ತ್ರಿಶೂಲ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಪ್ರಶಾಂತ್ ಜಿ ರುದ್ರಪ್ಪ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಸಂಗೀತ ಅರ್ಜುನ್‌ ಜನ್ಯ ಅವರದು. ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಸುಧಾರಾಣಿ, ಶ್ರೀನಿವಾಸಮೂರ್ತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Previous article‘BRO’ ಟೀಸರ್‌ | ಪವನ್‌ ಕಲ್ಯಾಣ್‌ – ಸಾಯಿ ಧರಮ್‌ ತೇಜ್‌ ತೆಲುಗು ಸಿನಿಮಾ
Next articleExecutionನಲ್ಲಿ ನಿರಾಸೆ ಮೂಡಿಸುವ ವಿಭಿನ್ನ ಸಾಮಾಜಿಕ ಪ್ರಯೋಗ ‘ಸೋಷಿಯಲ್‌ ಕರೆನ್ಸಿ’

LEAVE A REPLY

Connect with

Please enter your comment!
Please enter your name here