ಕಾಮಿಡಿ ರಿಯಾಲಿಟಿ ಶೋ ಖ್ಯಾತಿಯ ಜಗ್ಗಪ್ಪ ಮತ್ತು ಸುಷ್ಮಿತಾ ನಟನೆಯ ‘ಆನ್‌ಲೈನ್ ಮದುವೆ ಆಫ್‌ಲೈನ್‌ ಶೋಭನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ವೇಂಪಲ್ಲಿ ಬಾವಾಜಿ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು.

ಕಿರುತೆರೆ ಕಾಮಿಡಿ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ ಜಗ್ಗಪ್ಪ, ಸುಷ್ಮಿತಾ ಅಭಿನಯದ ‘ಅನ್‌ಲೈನ್‌ ಮದುವೆ ಆಫ್‌ಲೈನ್‌ ಶೋಭನ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವೇಂಪಲ್ಲಿ ಬಾವಾಜಿ ನಿರ್ದೇಶನದ ಹಾಸ್ಯಪ್ರದಾನ ಚಿತ್ರವಿದು. ಆನ್‌ಲೈನ್‌ ಆಪ್ ಮೂಲಕ ಜೊತೆಯಾದ ಯುವಜೋಡಿಯ ಸುತ್ತ ನಡೆಯುವ ಹಾಸ್ಯಪ್ರದಾನ ಕಥಾಹಂದರ ಹೊಂದಿರುವ ಚಿತ್ರವನ್ನು ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದೊರುವ ಈ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಯೋಜನೆ ನಿರ್ಮಾಪಕರದ್ದು. ಜಗ್ಗಪ್ಪ, ಸುಶ್ಮಿತ, ಸೀರುಂಡೆ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತಮ್ಮ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ವೇಂಪಲ್ಲಿ ಬಾವಾಜಿ, ‘ಪೂರ್ಣ ಪ್ರಮಾಣದ ಎಂಟರ್‌ಟೇನರ್‌ ಕಥಾಹಂದರ ಇಲ್ಲಿದೆ. ಕತೆಗೆ ಯಾರು ಸೂಟ್ ಆಗ್ತಾರೆ ಅಂತ ಹುಡುಕಿದಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದ ಜಗಪ್ಪ , ಸುಷ್ಮಿತಾ ಸಿಕ್ಕರು. ಇಡೀ ಚಿತ್ರದಲ್ಲಿ ನಗದೇ ಇರೋದಕ್ಕೆ ಗ್ಯಾಪ್ ಕೊಟ್ಟಿಲ್ಲ, ನಗದೇ ಇರುವವರಿಗೆ ಲಕ್ಷ ರೂಪಾಯಿ ಬಹುಮಾನ ಕೊಡುತ್ತೇವೆ! ಸದಾ ಸೋಷಿಯಲ್‌ ಮೀಡಿಯಾದಲ್ಲೇ ಇರುವ ಇಂದಿನ ಯುವ ಪೀಳಿಗೆಗೆ ಸಿನಿಮಾ ಬೇಗ ಕನೆಕ್ಟ್‌ ಆಗುತ್ತದೆ’ ಎನ್ನುತ್ತಾರೆ.

‘ಆರಂಭದಲ್ಲಿ ಸಿನಿಮಾದಲ್ಲಿ ಹಾಡು ಇರಲಿಲ್ಲ. ನಂತರ ಸೇರಿಸಲಾಯಿತು. ಆಡಂಬರ, ಅಬ್ಬರ ಇಲ್ಲದ ಫ್ಯಾಮಿಲಿ ಸ್ಟೋರಿಯಿದು’ ಎನ್ನುವುದು ನಾಯಕಿ ಸುಷ್ಮಿತಾ ಮಾತು. ಹೀರೋ ಜಗ್ಗಪ್ಪ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ‘ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತ ಇರುತ್ತೇನೆ. ಆಗ ಆನ್‌ಲೈನ್ ಆಪ್‌ನಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಗಂಡ ಹೆಂಡತಿಯ ಜಗಳದ ಡೈಲಾಗ್‌ಗಳು ಚೆನ್ನಾಗಿ ಬಂದಿವೆ’ ಎಂದರು. ಸೀರುಂಡೆ ರಘು ಚಿತ್ರದಲ್ಲಿ ನಾಯಕಿಯ ಸಹೋದರನಾಗಿ ಕಾಣಿಸಿಕೊಂಡಿದ್ದಾರೆ. ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು ಶೋಗಳ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅರುಣ್‌ ಕುಮಾರ್‌ ಸಂಗೀತ, ಬಾಲು ಛಾಯಾಗ್ರಹಣ, ರೋಹಿತ್ ಸಂಕಲನ, ಅಲೆಕ್ಸ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here