ದಕ್ಷಿಣ ಭಾರತ ಸಿನಿಮಾಗಳ ಬಹುದೊಡ್ಡ ಪ್ರಶಸ್ತಿ ಸಮಾರಂಭ SIIMA ಈ ಬಾರಿ ದುಬೈನಲ್ಲಿ ಸೆಪ್ಟೆಂಬರ್‌ 15, 16ರಂದು ನಡೆಯಲಿದೆ. ಈ ಕುರಿತು ಮಾಹಿತಿ ನೀಡುವ ಸುದ್ದಿಗೋಷ್ಠಿಯಲ್ಲಿ ಸಿನಿ ತಾರೆಯರಾದ ಶ್ರುತಿ ಹಾಸನ್‌, ದನಂಜಯ, ಪ್ರಣೀತಾ ಉಪಸ್ಥಿತರಿದ್ದರು.

ದಕ್ಷಿಣ ಭಾರತ ಸಿನಿಮಾಗಳ ಹಬ್ಬ SIIMA ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಸೆಪ್ಟಂಬರ್ 15 ಮತ್ತು 16 ರಂದು ದುಬೈನಲ್ಲಿ ಜರುಗಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಅತ್ಯತ್ತುಮ‌ ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಹಲವು ಸಿನಿಮಾ ವಿಭಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವ ಸಮಾರಂಭವಿದು. ಈ ಕುರಿತು ನಟ ಡಾಲಿ ಧನಂಜಯ ಮಾತನಾಡಿ, ‘ಎರಡನೇ ಸೈಮಾ‌ ಅವಾರ್ಡ್‌ನಿಂದ ನನ್ನ ನಂಟು ಇದೆ’ ಎಂದರು. ನಟಿ ಪ್ರಣೀತಾ ಸುಭಾಷ್ ಮಾತನಾಡಿ ಸೈಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಭಾಷಾ ನಟಿ ಶೃತಿ ಹಾಸನ್, ‘ಬೆಂಗಳೂರಿಗೆ ಮರಳಿ ಬಂದಿರುವುದು ಖುಷಿಯಾಗಿದೆ. ಮೊದಲ ವರ್ಷ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದೆ, SIIMA ಅವಾರ್ಡ್‌ ಕಾರ್ಯಕ್ರಮದಲ್ಲಿ ಮತ್ತಷ್ಟು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಚಿತ್ರರಂಗದ ಕಲಾವಿದರನ್ನು, ಪ್ರತಿಭಾವಂತರನ್ನು ಗೌರವಿಸುವ ಕೆಲಸ ಮುಂದುವರಿಸಲಿʼ ಎಂದು ಹಾರೈಸಿದರು.

ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ ‘ಸತತ 11ನೇ ವರ್ಷದಿಂದ ‘SIIMA’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿರುವ ಕಾರ್ಯಕ್ರಮವಿದು. ಈ ಬಾರಿ SIIMA ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ನಡೆಯಲಿದೆ. ಈ ಬಾರಿ ಹೆಚ್ಚು ಚಿತ್ರಗಳಿವೆ. ದಕ್ಷಿಣ ಭಾರತದ ಪ್ರತಿಭೆಗಳನ್ನು ಈ ಬಾರಿ ಹೆಚ್ಚು ಹೆಚ್ಚು ಪ್ರದರ್ಶನ ಮಾಡಲಾಗುವುದು ಎಂದರು.

Previous articleಉಪೇಂದ್ರರ ಮೇಲೆ ‘ಅಟ್ರಾಸಿಟಿ’ ಪ್ರಕರಣದಡಿ ದೂರು | ಕೋರ್ಟ್‌ ಮೊರೆ ಹೋದ ನಟ
Next article‘ಜಿಲೇಬಿ’ ಟ್ರೈಲರ್‌ | ವಿಜಯ ಭಾಸ್ಕರ್‌ ತೆಲುಗು ಸಿನಿಮಾ ಆಗಸ್ಟ್‌ 18ರಂದು ತೆರೆಗೆ

LEAVE A REPLY

Connect with

Please enter your comment!
Please enter your name here