ಪ್ರಸನ್ನ ವಿತನಗೆ ನಿರ್ದೇಶನದ ‘ಪ್ಯಾರಡೈಸ್‌’ ಮಲಯಲಾಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ರೋಷನ್‌ ಮ್ಯಾಥ್ಯೂಸ್‌ ಮತ್ತು ದರ್ಶನಾ ರಾಜೇಂದ್ರನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಇತ್ತೀಚೆಗೆ ಮುಕ್ತಾಯಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮಣಿರತ್ನಂ ಪ್ರಸ್ತುತ ಪಡಿಸುತ್ತಿರುವ ಬಹುನಿರೀಕ್ಷಿತ ‘ಪ್ಯಾರಡೈಸ್’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ಶ್ರೀಲಂಕಾ ನಿರ್ದೇಶಕ ಪ್ರಸನ್ನ ವಿತನಗೆ ಅವರು ನಿರ್ದೇಶಿಸಿದ್ದು, ಚಿತ್ರದಲ್ಲಿ ರೋಷನ್ ಮ್ಯಾಥ್ಯೂಸ್ ಮತ್ತು ದರ್ಶನಾ ರಾಜೇಂದ್ರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ, ತಮ್ಮ 5ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಶ್ರೀಲಂಕಾಕ್ಕೆ ಭೇಟಿ ನೀಡಿದ ಕಿರುತೆರೆ ನಿರ್ಮಾಪಕ (ರೋಷನ್) ಮತ್ತು ಅವರ ಪತ್ನಿ ವ್ಲಾಗರ್ (ದರ್ಶನಾ) ಸುತ್ತ ಸುತ್ತುತ್ತದೆ. ಆಗ ಶ್ರೀಲಂಕಾದಲ್ಲಿ 2022ರ ಸಮಯದಲ್ಲಿ ದೇಶದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿರುತ್ತದೆ. ಈ ಸಮಯದಲ್ಲಿ ಹಣದುಬ್ಬರ, ಮೂಲಭೂತ ಸೌಕರ್ಯಗಳ ಕೊರತೆ ಕಾರಣವಾಗಿ ಗಲಭೆಗಳು ನಡೆಯುತ್ತಿರುತ್ತವೆ. ದಂಪತಿಗಳಿಬ್ಬರು ಉಳಿದುಕೊಂಡಿದ್ದ ಪ್ರವಾಸಿ ತಾಣದಲ್ಲಿ ಸ್ಥಳೀಯರಿಂದ ದಾಳಿಗೆ ಒಳಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅನಿರೀಕ್ಷಿತ ಘಟನೆಗಳಿಂದಾಗಿ ಅವರಿಬ್ಬರ ಬದುಕಿನಲ್ಲಿ ಏರುಪೇರಾಗುತ್ತದೆ. ನಂತರ ಪೊಲೀಸರ್‌ ಕಾರ್ಯಾಚರಣೆ ಇನ್ನಿತರ ಅಂಶಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಚಿತ್ರವನ್ನು Madras Talkies ಬ್ಯಾನರ್ ಅಡಿಯಲ್ಲಿ ಮಣಿರತ್ನಂ ನಿರ್ಮಿಸಿದ್ದಾರೆ. ಶ್ಯಾಮ್ ಫೆರ್ನಾಂಡೋ ಮತ್ತು ಮಹೇಂದ್ರ ಪೆರೇರಾ ಪೋಷಕ ಪಾತ್ರಗಳಲ್ಲಿದ್ದು, ಚಿತ್ರವು ಇಂಗ್ಲೀಷ್, ಮಲಯಾಳಂ, ತಮಿಳು, ಹಿಂದಿ ಮತ್ತು ಸಿಂಹಳ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಬೂಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ‘ಕಿಮ್ ಜಿಸೋಕ್’ ಪ್ರಶಸ್ತಿ ಗೆದ್ದಿದೆ. ಚಿತ್ರಕಥೆಯನ್ನು ಪ್ರಸನ್ನ ಮತ್ತು ಅನುಷ್ಕಾ ಸೇನಾನಾಯಕ್ ಬರೆದಿದ್ದು, ರಾಜೀವ್ ರವಿ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ, ತಪಸ್ ನಾಯಕ್ ಧ್ವನಿ ವಿನ್ಯಾಸ ಮತ್ತು ಸಂಗೀತ ನಿರ್ದೇಶನವಿದೆ. ಚಿತ್ರದಲ್ಲಿ ಶ್ಯಾಮ್ ಫೆರ್ನಾಂಡೋ ಮತ್ತು ಮಹೇಂದ್ರ ಪೆರೇರಾ ಪೋಷಕ ಪಾತ್ರಗಳಲ್ಲಿದ್ದಾರೆ. ಸಿನಿಮಾವು ಇಂಗ್ಲೀಷ್, ಮಲಯಾಳಂ, ತಮಿಳು, ಹಿಂದಿ ಮತ್ತು ಸಿಂಹಳ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸನ್ನ ವಿತನಗೆ ಅವರು ‘ಡೆತ್ ಆನ್ ಎ ಫುಲ್ ಮೂನ್ ಡೇ’ (1997) ಮತ್ತು ‘ಆಗಸ್ಟ್ ಸನ್’ (2003) ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

LEAVE A REPLY

Connect with

Please enter your comment!
Please enter your name here