ದಾಮೋಧರನ್‌ ನಿರ್ದೇಶನದ ‘ಪಾರ್ಟ್ನರ್‌’ ಕಾಮಿಡಿ – ಸೈಂಟಿಫಿಕ್‌ ಫಿಕ್ಷನ್‌ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಆದಿ ಪಿನಿಸೆಟ್ಟಿ, ಹನ್ಸಿಕಾ ಮೋಟ್ವಾನಿ, ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಜುಲೈ 28ರಂದು ತೆರೆಕಾಣಲಿದೆ.

ನಟಿ ಹನ್ಸಿಕಾ ಮೋಟ್ವಾನಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಪಾರ್ಟ್ನರ್’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಇದು ಕಾಮಿಡಿ – ಸೈಂಟಿಫಿಕ್‌ ಫಿಕ್ಷನ್‌ ಕತೆ. ಪ್ರಮುಖ ಪಾತ್ರಗಳಲ್ಲಿ ಆದಿ ಪಿನಿಸೆಟ್ಟಿ, ಹನ್ಸಿಕಾ ಮೋಟ್ವಾನಿ ಮತ್ತು ಯೋಗಿ ಬಾಬು ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಆದಿ ನಿರುದ್ಯೋಗಿ ಯುವಕನ ಪಾತ್ರ ನಿರ್ವಹಿಸಿದ್ದಾರೆ. ಅವರು ನಕಲಿ ವೈಜ್ಞಾನಿಕ ಕಂಪನಿಯೊಂದಕ್ಕೆ ಸೇರುತ್ತಾರೆ. ಅಲ್ಲಿ ವಿಜ್ಞಾನಿಗಳ ಆವಿಷ್ಕಾರವನ್ನು ಕದಿಯಲು ಪ್ರಯತ್ನಿಸುತ್ತಿರುವಾಗ, ಆಕಸ್ಮಿಕವಾಗಿ ಯೋಗಿ ಬಾಬು ಅವರಿಗೆ ನೀಲಿ ದ್ರವವೊಂದು ಚುಚ್ಚಲ್ಪಟ್ಟು, ರಾತ್ರೋರಾತ್ರಿ ಸುಂದರ ಮಹಿಳೆಯಾಗಿ (ಹನ್ಸಿಕಾ ಮೋಟ್ವಾನಿ) ಪರಿವರ್ತನೆಯಾಗುತ್ತಾರೆ! ನಂತರ ಅವರು ತಮ್ಮ ಮೂಲ ದೇಹವನ್ನು ಮರಳಿ ಪಡೆಯುವುದು ಹೇಗೆ ಎನ್ನುವುದು ಚಿತ್ರದ ಕಥಾವಸ್ತು. ಪಾಲಕ್ ಲಾಲ್ವಾನಿ, ಪಾಂಡ್ಯ ರಾಜನ್ ಮತ್ತು ರೋಬೋ ಶಂಕರ್ ಚಿತ್ರದ ಇತರೆ ಪ್ರಮುಖ ಕಲಾವಿದರು. Royal Fortune Creations (R F C) ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಮನೋಜ್ ದಾಮೋಧರನ್ ನಿರ್ದೇಶಿಸಿದ್ದಾರೆ. ಸಂತೋಷ್ ದಯಾನಿಧಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದೇ ಜುಲೈ 28ರಂದು ಸಿನಿಮಾ ಬಿಡುಗಡೆಯಾಗಲಿದೆ.

Previous articleಕಮಲ ಹಾಸನ್‌ ‘KH233’ ಸಿನಿಮಾ ಟೈಟಲ್‌ ಟೀಸರ್‌ | ಎಚ್‌ ವಿನೋದ್‌ ನಿರ್ದೇಶನ
Next articleಅಲ್ಫೋನ್ಸ್‌ ಪುತ್ರೆನ್‌ ‘ಗಿಫ್ಟ್‌’ ತಮಿಳು ಸಿನಿಮಾಗೆ ಇಳಯರಾಜ ಸಂಗೀತ

LEAVE A REPLY

Connect with

Please enter your comment!
Please enter your name here