‘ಗಿಫ್ಟ್‌’ ತಮಿಳು ಚಿತ್ರದೊಂದಿಗೆ ಅಲ್ಫೋನ್ಸ್‌ ಪುತ್ರೆನ್‌ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇಳಯರಾಜ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವುದು ವಿಶೇಷ. ಸ್ಯಾಂಡಿ, ಕೋವೈ ಸರಳಾ, ಸಹನಾ ಸರ್ವೇಶ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಅಲ್ಫೋನ್ಸ್ ಪುತ್ರೆನ್ ತಮ್ಮ ನಿರ್ದೇಶನದ ನೂತನ ತಮಿಳ ಸಿನಿಮಾಗೆ ‘ಗಿಫ್ಟ್‌’ ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ಇಳಯರಾಜ ಅವರ ಸಂಗೀತ ಸಂಯೋಜನೆ ಇರಲಿದೆ. ಪುತ್ರೆನ್ ಈ ಹಿಂದೆ ಇಳಯರಾಜ ಅವರೊಂದಿಗೆ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ತಮ್ಮ Instagram ಖಾತೆಯಲ್ಲಿ ಪೋಟೋ ಹಂಚಿಕೊಂಡು ಸಂತಸ ಹಂಚಿಕೊಂಡಿದ್ದರು. ಈಗ ಶೀರ್ಷಿಕೆ ಕುರಿತಂತೆ ಪೋಸ್ಟರ್‌ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ರೋಮಿಯೋ ಪಿಕ್ಚರ್ಸ್ ಬ್ಯಾನರ್‌ನಡಿ ರಾಹುಲ್‌ ಸಿನಿಮಾವನ್ನು ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಸ್ಯಾಂಡಿ, ಕೋವೈ ಸರಳಾ, ಸಹನಾ ಸರ್ವೇಶ್, ಸಂಪತ್ ರಾಜ್, ರಾಹುಲ್, ಚಾರ್ಲಿ, ರೈಚಲ್ ರಬೆಕ್ಕಾ, ಗೋಪಾಲನ್ ಪಾಲಕ್ಕಾಡ್ ಮತ್ತು ಸೈಕಲ್ ಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪುತ್ರೆನ್ ಈ ಸಿನಿಮಾದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಅವರ ಮೊದಲ ಚಿತ್ರ ‘ನೇರಮ್’ (2013) ಮಲಯಾಳಂ – ತಮಿಳು ದ್ವಿಭಾಷಾ ಚಲನಚಿತ್ರವಾಗಿತ್ತು. ನಂತರ ‘ಅವಿಯಲ್’ (2016) ತಮಿಳು ಸಿನಿಮಾ ನಿರ್ದೇಶಿಸಿದ್ದರು.

Previous article‘ಪಾರ್ಟ್ನರ್‌’ ಟ್ರೈಲರ್‌ | ಆದಿ ಪಿನಿಸೆಟ್ಟಿ – ಹನ್ಸಿಕಾ – ಯೋಗಿ ಬಾಬು ತಮಿಳು ಸಿನಿಮಾ
Next article‘ಡೆವಿಲ್‌’ ತೆಲುಗು ಸಿನಿಮಾ ಟೀಸರ್‌ | ಕಲ್ಯಾಣ್‌ ರಾಮ್‌ ಬರ್ತ್‌ಡೇ ಉಡುಗೊರೆ

LEAVE A REPLY

Connect with

Please enter your comment!
Please enter your name here