Emmy ಪ್ರಶಸ್ತಿ ವಿಜೇತ ರಿಚಿ ಮೆಹ್ತಾ ನಿರ್ದೇಶನದ ‘ಪೋಚರ್’ ಮಲಯಾಳಂ ಸರಣಿ ಸ್ಟ್ರೀಮಿಂಗ್ ದಿನಾಂಕ ಘೋಷಣೆಯಾಗಿದೆ. ನಿಮಿಷಾ ಸಜಯನ್ ಮತ್ತು ರೋಷನ್ ಮ್ಯಾಥ್ಯೂ ಸರಣಿಯ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಿಮಿಷಾ ಸಜಯನ್ ಮತ್ತು ರೋಷನ್ ಮ್ಯಾಥ್ಯೂ ಅಭಿನಯದ ‘ಪೋಚರ್’ ಕ್ರೈಂ ಸರಣಿ ಬಿಡುಗಡೆ ದಿನಾಂಕ ಘೋಷಿಸಿದೆ. ಈ ಮಲಯಾಳಂ ಸರಣಿಯನ್ನು Emmy ಪ್ರಶಸ್ತಿ ವಿಜೇತ ರಿಚಿ ಮೆಹ್ತಾ ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ದಿಬ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರದಲ್ಲಿದ್ದಾರೆ. ಸರಣಿಯು ಫೆಬ್ರವರಿ 23ರಿಂದ Prime Videoದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸರಣಿಯನ್ನು ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಣ ಸಂಸ್ಥೆಯಾದ QC Entertainment ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಸರಣಿಯು ಭಾರತೀಯ ಅರಣ್ಯ ಸೇವಾ ಅಧಿಕಾರಿಗಳು, ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಎನ್‌ಜಿಒ ಕಾರ್ಯಕರ್ತರು, ಪೊಲೀಸ್ ಕಾನ್ಸ್‌ಟೇಬಲ್‌ಗಳು ಮತ್ತು ಭಾರತೀಯ ಇತಿಹಾಸದಲ್ಲಿ ಅತಿದೊಡ್ಡ ದಂತ ಬೇಟೆಯಾಡುವ ಜಾಲವನ್ನು ತನಿಖೆ ಮಾಡಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಹೋರಾಡಿದವರ ಕಥೆಯನ್ನು ಹೇಳಹೊರಟಿದೆ. ಸರಣಿಯ ಪಾತ್ರಧಾರಿಗಳಾದ ಕಳ್ಳ ಬೇಟೆಗಾರನನ್ನು ಕೇರಳ ಮತ್ತು ನವದೆಹಲಿಯ ನೈಜ-ಜೀವನದ ಸೆಟ್ಟಿಂಗ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಸರಣಿಯನ್ನು ಮೂಲ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಯಾರಕರು ತಿಳಿಸಿದ್ದಾರೆ. ಸರಣಿಯನ್ನು ಎಡ್ವರ್ಡ್ ಹೆಚ್ ಹ್ಯಾಮ್ ಜೂನಿಯರ್, ರೇಮಂಡ್ ಮ್ಯಾನ್ಸ್‌ಫೀಲ್ಡ್ ಮತ್ತು ಸೀನ್ ಮ್ಯಾಕ್‌ಕಿಟ್‌ಟ್ರಿಕ್ ನಿರ್ಮಿಸಿದ್ದಾರೆ.
echoes from the jungle expose a deadly conspiracy! 🐘🌳#PoacherOnPrime, Feb 23#RichieMehta @_QCEnt @NimishaSajayan @roshanmathew22 @debu_dibyendu pic.twitter.com/5FG2wBp4cp
— prime video IN (@PrimeVideoIN) January 16, 2024