ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ‘ಫೈಟರ್‌’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ, ಅನಿಲ್‌ ಕಪೂರ್‌, ವಿವೇಕ್‌ ಒಬೆರಾಯ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಜನವರಿ 25ರಂದು ಸಿನಿಮಾ ತೆರೆಕಾಣಲಿದೆ.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ‘ಫೈಟರ್‌’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಚಿತ್ರವು ಭಾರತೀಯ ವಾಯುಪಡೆಯ (AIF) ಕಾರ್ಯಾಚರಣೆಗಳ ಸುತ್ತ ಸುತ್ತುತ್ತದೆ. ಹೃತಿಕ್ ‘ಪ್ಯಾಟಿ’ ವಾಯುಪಡೆಯಲ್ಲಿ ಸ್ಕ್ವಾಡ್ರನ್ ನಾಯಕನಾಗಿ ನಟಿಸಿದ್ದಾರೆ. ‘ಮಿನ್ನಿ’ (ದೀಪಿಕಾ ಪಡುಕೋಣೆ) ಇನ್ನೊಬ್ಬ ನುರಿತ ಏವಿಯೇಟರ್ ಆಗಿ ಕಾಣಿಸಿಕೊಂಡಿದ್ದಾರೆ. ತಂಡದ ನಾಯಕನಾಗಿ ರಾಕಿ (ಅನಿಲ್ ಕಪೂರ್) ಅಭಿನಯಿಸಿದ್ದಾರೆ. ಟ್ರೇಲರ್‌ 2019 ರಲ್ಲಿ ಭಯೋತ್ಪಾದಕರು ಪುಲ್ವಾಮಾದಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಬಾಂಬ್ ಸ್ಫೋಟಿಸಿದ್ದ ನೈಜ ದಾಳಿಯನ್ನು ಈ ಚಿತ್ರ ಒಳಗೊಂಡಿದೆ.

ಪ್ಯಾಟಿ ಮತ್ತು ಅವನ ತಂಡವನ್ನು ವೈಮಾನಿಕ ದಾಳಿ ಮಾಡಲು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಲಾಗುತ್ತದೆ. ಯುದ್ದದಲ್ಲಿ ಗೆಲ್ಲುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಪ್ಯಾಟಿ ‘ಭಾರತ್ ಆಕ್ರಮಿತ ಕಾಶ್ಮೀರ’ ಎಂದು ಸಾರಿ ಹೇಳುತ್ತಾನೆ. ಟ್ರೇಲರ್‌ನಲ್ಲಿ ಸಾಹಸಮಯ ದೃಶ್ಯಗಳನ್ನು ತೋರಿಸಲಾಗಿದೆ. ‌ಈ ಸಿನಿಮಾ ಜನವರಿ ಇದೇ 25ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ತಲತ್ ಅಜೀಜ್ (ಹೃತಿಕ್ ರೋಷನ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ). ಕರಣ್ ಸಿಂಗ್ ಗ್ರೋವರ್, ಮತ್ತು ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಹುಸೇನ್‌ ದಲಾಲ್‌ ರಚಿಸಿದ್ದು, Viacom18 ಸ್ಟುಡಿಯೋಸ್ ಮತ್ತು Marflix Pictures ನಿರ್ಮಿಸಿವೆ.

LEAVE A REPLY

Connect with

Please enter your comment!
Please enter your name here