ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಕಝಾನ್‌ ಖಾನ್‌ ಹೃದಯಾಘಾತದಿಂದ ಅಗಲಿದ್ದಾರೆ. ‘ಹಬ್ಬ’, ‘ನಾಗದೇವತೆ’, ‘ಹುಬ್ಬಳ್ಳಿ’ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ಕಝಾನ್‌ ನಟಿಸಿದ್ದರು.

ದಕ್ಷಿಣ ಭಾರತದ ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ಖಳಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದ ಕಝಾನ್‌ ಖಾನ್‌ ಹೃದಯಾಘಾತದಿಂದ ಅಗಲಿದ್ದಾರೆ. ಪಿ ವಾಸು ನಿರ್ದೇಶನದ ‘ಸೆಂಥಮಿಳ್‌ ಪಾಟ್ಟು’ (1992) ಮಲಯಾಳಂ ಚಿತ್ರದ ‘ಭೂಪತಿ’ ಪಾತ್ರದೊಂದಿಗೆ ಅವರು ಬೆಳ್ಳಿತೆರೆ ಪ್ರವೇಶಿಸಿದ್ದರು. ಮಲಯಾಳಂನಲ್ಲಿ ಅವರ ಮೊದಲ ಸಿನಿಮಾ ಶಾಜಿ ಕೈಲಾಸ್‌ ಅವರ ‘ದಿ ಕಿಂಗ್‌’ (1995). ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಝಾನ್‌ ಖಾನ್‌ ನಟಿಸಿದ್ದಾರೆ. ಹಬ್ಬ, ನಾಗದೇವತೆ, ಹುಬ್ಬಳ್ಳಿ.. ಅವರ ಕೆಲವು ಪ್ರಮುಖ ಕನ್ನಡ ಸಿನಿಮಾಗಳು. CID ಮೂಸಾ, ಉಳ್ಳಥೈ ಅಳ್ಳಿತಾ, ಮೆಟ್ಟುಕುಡಿ, ದಿ ಡಾನ್‌, ನಾಮ್‌ ಇರುವರ್‌ ನಮಕು ಇರುವರ್‌ ಅವರ ಕೆಲವು ಪ್ರಮುಖ ತಮಿಳು ಸಿನಿಮಾಗಳು. ಕಳೆದ ಐದಾರು ವರ್ಷಗಳಿಂದ ಕಝಾನ್‌ ಖಾನ್‌ ಸಿನಿಮಾರಂಗದಿಂದ ಕೊಂಚ ದೂರವಾಗಿದ್ದರು ಎನ್ನಲಾಗಿದೆ. ಅವರೊಂದಿಗೆ ನಟಿಸಿದ ನಾಯಕನಟರು ಕಝಾನ್‌ ನಿಧನಕ್ಕೆ ಟ್ವಿಟರ್‌ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.

https://www.instagram.com/p/CtZZnj6P_on/?utm_source=ig_web_copy_link&igshid=MzRlODBiNWFlZA==

Previous article‘ಬೇಕಿತ್ತಾ ಬೇಕಿತ್ತಾ, ಈ ಲವ್ವು ಬೇಕಿತ್ತಾ!’ | ಗುರುನಂದನ್‌ ಸಿನಿಮಾ ಲಿರಿಕಲ್‌ ಸಾಂಗ್‌
Next articleAmazon Primeನಲ್ಲಿ ನವಾಜುದ್ದೀನ್‌ ಸಿದ್ದಿಕಿ – ಅವನೀತ್‌ ಕೌರ್‌ ‘ಟಿಕು ವೆಡ್ಸ್‌ ಶೇರು’

LEAVE A REPLY

Connect with

Please enter your comment!
Please enter your name here