ಮಾರುತಿ ನಿರ್ದೇಶನದಲ್ಲಿ ಪ್ರಭಾಸ್‌ ನಟಿಸುತ್ತಿರುವ ‘ದಿ ರಾಜಾಸಾಬ್‌’ ಸಿನಿಮಾದ glimpses ರಿಲೀಸ್‌ ಆಗಿದೆ. ಇದೊಂದು ರೊಮ್ಯಾಂಟಿಕ್‌ ಹಾರರ್‌ – ಕಾಮಿಡಿ ಸಿನಿಮಾ. ಗೆಲುವಿನ ಹಾದಿಗೆ ಮರಳಿರುವ ನಟ ಇಲ್ಲಿ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದಾರೆ. 2025ರ ಏಪ್ರಿಲ್‌ 10ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

‘ಸಲಾರ್‌’,’ಕಲ್ಕಿ’ ಸಿನಿಮಾಗಳ ಯಶಸ್ಸಿನ ನಂತರ ಪ್ರಭಾಸ್‌ ಗೆಲುವಾಗಿದ್ದಾರೆ. ಅವರ ನೂತನ ಸಿನಿಮಾ ‘ದಿ ರಾಜಾಸಾಬ್‌’ ಗ್ಲಿಮ್ಸಸ್‌ ರಿಲೀಸ್‌ ಆಗಿದೆ. ಟೀಸರ್‌ನಲ್ಲಿ ಅವರು ಲವರ್‌ ಬಾಯ್‌ ಅವತಾರದಲ್ಲಿದ್ದು, ಟಾಲಿವುಡ್‌ನ ಅವರ ಅಭಿಮಾನಿಗಳಿಗೆ ಹಳೆಯ ಪ್ರಭಾಸ್‌ ಕಾಣಿಸುತ್ತಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಈ ಚಿತ್ರದ ಶೇ 40ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮತ್ತೊಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. glimpses ಜೊತೆ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದ್ದು, 2025ರ ಏಪ್ರಿಲ್‌ 10ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

‘ಕಾರ್ತಿಕೇಯ 2’, ‘ಧಮಾಕಾ’ ಸೇರಿದಂತೆ ಹಲವು ಹಿಟ್‌ ಚಿತ್ರಗಳನ್ನು ನಿರ್ಮಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಡಿ ಸಿನಿಮಾ ತಯಾರಾಗುತ್ತಿದೆ. ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದರೆ, ಕಾರ್ತಿಕ್ ಪಳನಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಎಸ್‌ ಎಸ್‌ ಥಮನ್ ಸಂಗೀತ, ರಾಮ್ ಲಕ್ಷ್ಮಣ್ ಮತ್ತು ಕಿಂಗ್ ಸೊಲೊಮನ್ ಸವರ ಸಾಹಸ ಚಿತ್ರಕ್ಕಿದೆ. ‘ಬಾಹುಬಲಿ’ ಖ್ಯಾತಿಯ ಕಮಲಾ ಕಣ್ಣನ್ ಆರ್ ಸಿ ವಿಎಫ್‌ಎಕ್ಸ್‌ನ ಉಸ್ತುವಾರಿ ವಹಿಸಿಕೊಂಡಿದ್ದು, ದೊಡ್ಡ ಪರದೆಯ ಮೇಲೆ ದೃಶ್ಯ ಚಮತ್ಕಾರ ನೀಡಲಿದೆ. ‘ಪ್ರತಿ ರೋಜು ಪಂಡಗ’, ತೆಲುಗಿನ ಹಾರರ್ ಕಾಮಿಡಿ ‘ಪ್ರೇಮ ಕಥಾ ಚಿತ್ರಂ’ ಮತ್ತು ರೊಮ್ಯಾಂಟಿಕ್ ಕಾಮಿಡಿ ‘ಮಹಾನುಭಾವುಡು’ ಸೇರಿ ಹಲವು ಸೂಪರ್‌ಹಿಟ್‌ಗಳಿಗೆ ಸಿನಿಮಾ ನಿರ್ದೇಶಿಸಿರುವ ಮಾರುತಿ ‘ದಿ ರಾಜಾಸಾಬ್‌’ ನಿರ್ದೇಶಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here