ಗಿರೀಶಾಯ ನಿರ್ದೇಶನಲ್ಲಿ ವೈಷ್ಣವ್‌ ತೇಜ್‌ ಮತ್ತು ಕೇತಿಕಾ ಶರ್ಮಾ ನಟನೆಯ ‘ರಂಗ ರಂಗ ವೈಭವಂಗ’ ತೆಲುಗು ಸಿನಿಮಾ ಸೆಟ್ಟೇರಿದೆ. ಇದೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ ಎಂದು ಹೇಳಿಕೊಂಡಿರುವ ಚಿತ್ರತಂಡ ಟೀಸರ್‌ನೊಂದಿಗೆ ಗಮನ ಸೆಳೆದಿದೆ.

ನಟ ವೈಷ್ಣವ್‌ ತೇಜ್‌ ಅಭಿನಯದ ನೂತನ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ ‘ರಂಗ ರಂಗ ವೈಭವಂಗ’ ಎಂದು ಶೀರ್ಷಿಕೆ ನಿಗದಿಯಾಗಿದ್ದು, ಚಿತ್ರದ ನಾಯಕಿಯಾಗಿ ಕೇತಿಕಾ ಶರ್ಮಾ ಆಯ್ಕೆಯಾಗಿದ್ದಾರೆ. “Get Ready for a Romantic Entertainer. #PanjaVaisshnavTej & #Ketikasharma in a brand new love story #RangaRangaVaibhavanga.” ಎನ್ನುವ ಸಂದೇಶದೊಂದಿಗೆ ಚಿತ್ರನಿರ್ಮಾಣ ಸಂಸ್ಥೆ ಟೀಸರ್‌ ಟ್ವೀಟ್‌ ಮಾಡಿದೆ. ರಿಷಿ ಮತ್ತು ರಾಧಾ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ವೈಷ್ಣವ್‌ ತೇಜ್‌ ಮತ್ತ ಕೇತಿಕಾ ಶರ್ಮಾ. ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜನೆಯಲ್ಲಿನ ಟೀಸರ್‌ ‘ಬಟರ್‌ಫ್ಲೈ ಕಿಸ್ಸಿಂಗ್‌’ ಕಾನ್ಸೆಪ್ಟ್‌ನೊಂದಿಗೆ ತಾಜಾ ಎನಿಸುತ್ತದೆ. ಈ ಹಿಂದೆ ‘ಆದಿತ್ಯ ವರ್ಮಾ’ ಸಿನಿಮಾ ನಿರ್ದೇಶಿಸಿದ್ದ ಗಿರೀಶಾಯ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ. BVSN ಪ್ರಸಾದ್‌ ಮತ್ತು ಬಾಪಿನೀಡು ಬಿ. ನಿರ್ಮಾಣದ ಚಿತ್ರಕ್ಕೆ ಶಾಮ್‌ದಾತ್‌ ಸೈನುದ್ದೀನ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.

Previous articleಟ್ರೈಲರ್‌ | ರಾಜಕುಮಾರ್‌ ರಾವ್‌ – ಭೂಮಿ ಪೆಡ್ನೇಕರ್‌ ‘ಬಧಾಯಿ ದೋ’; ಸಲಿಂಗಕಾಮದ ಕಥಾನಕ
Next articleಮಾನವತೆಯ ಅಮಾನವೀಯ ಸತ್ಯಗಳ ಸಂಕಲನ ‘ಹ್ಯೂಮನ್’

LEAVE A REPLY

Connect with

Please enter your comment!
Please enter your name here