ನಾನಿ ಅಭಿನಯದ 30ನೇ ತೆಲುಗು ಸಿನಿಮಾ ‘Hi Nanna’ ನಾಯಕಿಯಾಗಿ ಮೃಣಾಲ್‌ ಠಾಕೂರ್‌ ಆಯ್ಕೆಯಾಗಿದ್ದಾರೆ. ಅಪ್ಪ – ಮಗಳ ಎಮೋಷನಲ್‌ ಜರ್ನಿಯ ಈ ಕತೆಯನ್ನು ಶೌರ್ಯುವ್‌ ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ‘ದಸರಾ’ ಚಿತ್ರದೊಂದಿಗೆ PAN ಇಂಡಿಯಾ ನಟ ಎಂದು ಕರೆಸಿಕೊಂಡಿರುವ ನಾನಿ ನೂತನ ಸಿನಿಮಾ ‘Hi Nanna’ ಸುದ್ದಿಯಲ್ಲಿದೆ. ಇದು ಅಪ್ಪ – ಮಗಳ ಎಮೋಷನಲ್‌ ಜರ್ನೀಯ ಕಥಾನಕ. ಚಿತ್ರದ ನಾಯಕಿಯಾಗಿ ‘ಸೀತಾ ರಾಮಂ’ ತೆಲುಗು ಸಿನಿಮಾ ಖ್ಯಾತಿಯ ಮೃಣಾಲ್‌ ಠಾಕೂರ್‌ ಆಯ್ಕೆಯಾಗಿದ್ದಾರೆ. ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ ‘ಹಾಯ್ ಅಪ್ಪ’ ಎಂದು. ದಕ್ಷಿಣದ ಇತರೆ ಭಾಷೆಗಳ ಪ್ರೇಕ್ಷಕರಿಗೂ ಕನೆಕ್ಟ್‌ ಆಗಲಿ ಎನ್ನುವ ಉದ್ದೇಶದಿಂದ ‘Hi Nanna’ ಎಂದು ಶೀರ್ಷಿಕೆ ನಿಗಧಿಯಾಗಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ. ಶೌರ್ಯುವ್‌ ಚೊಚ್ಚಲ ನಿರ್ದೇಶನದ ಚೊಚ್ಚಲ ಚಿತ್ರವನ್ನು ವೈರ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಮೋಹನ್‌ ಚೆರುಕುರಿ, ಡಾ ವಿಜೇಂದ್ರ ರೆಡ್ಡಿ, ಮೂರ್ತಿ ಕಲಗಾರ ನಿರ್ಮಿಸುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಛಾಯಾಗ್ರಹಣ, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here