ಟ್ಯಾಕ್ಸಿ ಚಾಲಕನ ಸುತ್ತ ಹೆಣೆದ ಕತೆ ‘ಎಲ್ಲೋ ಬೋರ್ಡ್‌’ ಈ ವಾರ ತೆರೆಕಾಣುತ್ತಿದೆ. ಚಿತ್ರದ ಪ್ರೀರಿಲೀಸ್‌ ಇವೆಂಟ್‌ನಲ್ಲಿ ಅತಿಥಿಯಾಗಿ ಪಾಲ್ಗೊಂಡ ನಟ ಸುದೀಪ್‌ ತಮ್ಮ ಆತ್ಮೀಯ ಗೆಳೆಯ, ಹೀರೋ ಪ್ರದೀಪ್‌ಗೆ ಶುಭ ಹಾರೈಸಿದರು.

“ಪ್ರದೀಪ್ ನಮ್ಮ‌ಮನೆ ಮಗನಿದ್ದ ಹಾಗೆ. ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಕೂಡ ಈ ಸಿನಿಮಾವನ್ನು ನೋಡಿದೆ, ಚೆನ್ನಾಗಿದೆ. ಒಂದೊಳ್ಳೇ ಮೆಸೇಜ್‌ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕ್ಯಾಬ್ ಡ್ರೈವರ್‌ಗಳಿಗೆ ಗೌರವ ಕೊಟ್ಟಿದ್ದಾರೆ. ನಾವು ಮಾಡಿದ ಚಿತ್ರವನ್ನು ಯಾರಿಗಾದರೂ ತೋರಿಸುವಾಗ ಸ್ವಲ್ಪ ಮುಜುಗರವಿರುತ್ತದೆ.‌ ಇಲ್ಲಿ ನಿರ್ದೇಶಕರಿಗಿರುವ ಆತಂಕ ಕಂಡು ‌ನನ್ನ ಹಳೇ ಸಿನಿಮಾಗಳು ನೆನಪಾದವು” ಎಂದರು ನಟ ಸುದೀಪ್‌. ನಟ ಪ್ರದೀಪ್‌ ಅವರ ಬಗ್ಗೆ ಸುದೀಪ್‌ರಿಗೆ ವಿಶೇಷ ಪ್ರೀತಿ. KPL ದಿನಗಳಲ್ಲಿ ಇಬ್ಬರೂ ಹೆಚ್ಚು ಹತ್ತಿರವಾದರು. ಅಂದಹಾಗೆ ಪ್ರದೀಪ್‌ ಅಭಿನಯದ ‘ಎಲ್ಲೋ ಬೋರ್ಡ್‌’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಪ್ರೀರಿಲೀಸ್‌ ಇವೆಂಟ್‌ನಲ್ಲಿ ಸುದೀಪ್‌ ಪ್ರಮುಖ ಅತಿಥಿಯಾಗಿ ಪಾಲ್ಗೊಂಡಿದ್ದರು.

“‌ಟ್ಯಾಕ್ಸಿ ಚಾಲಕನೊಬ್ಬನ ಸುತ್ತ ನಡೆಯುವ ಕತೆ. ಉತ್ತಮ ಸಂದೇಶದೊಂದಿಗೆ ಕತೆ ಮಾಡಿರುವುದಾಗಿ ಹೇಳುತ್ತಾರೆ ನಿರ್ದೇಶಕ ತ್ರಿಲೋಕ್‌ ರೆಡ್ಡಿ. ಚಿತ್ರದ ಹೀರೋ ಪ್ರದೀಪ್‌ ಮಾತನಾಡಿ, “ಈ ರೀತಿಯ ಪಾತ್ರ ಸಿಕ್ಕಿದ್ದು ನನ್ನ ಪುಣ್ಯ. ಕರ್ನಾಟಕ ಸುತ್ತಿ ‌ಚಾಲಕರನ್ನು ಮಾತಾಡಿಸಿ ಬಂದಿದ್ದೇವೆ. ಎಲ್ಲಾ ಕಡೆ ನಮಗೆ ತುಂಬಾ ಗೌರವ ನೀಡಿ ಸಪೋರ್ಟ್ ಮಾಡಿದರು.‌ ನಮ್ಮ ಬಗ್ಗೆ ಗೌರವ ತರುವಂಥ ಸಿನಿಮಾ ಮಾಡಿದ್ದೀರಿ. ನಾವೆಲ್ಲ ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದು ಹೇಳಿದರು ನಮ್ಮ ಸಿನಿಮಾ ಇಷ್ಟೊಂದು ಪ್ರಭಾವ ಬೀರಿದ್ದು ಕಂಡು ಖುಷಿಯಾಯ್ತು” ಎಂದರು.

ನಿರ್ದೇಶಕ ತ್ರಿಲೋಕ್ ಮಾತನಾಡಿ, “ಆಟೋರಾಜ ಎಂದರೆ ಶಂಕರ್ ನಾಗ್ ಹೇಗೆ ನೆನಪಾಗ್ತಾರೋ ಹಾಗೇ ‘ಎಲ್ಲೋ ಬೋರ್ಡ್’ ಅಂದ್ರೆ ಪ್ರದೀಪ್ ನೆನಪಾಗುವಂತೆ ಸಿನಿಮಾ ಮೂಡಿಬಂದಿದೆ. ಈ ಚಿತ್ರ ಆರಂಭಿಸಿದಾಗಿನಿಂದಲೂ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ಹಿಂದೆ ಟೀಸರ್, ಟ್ರೈಲರ್ ರಿಲೀಸ್ ಮಾಡಿದ್ದರು. ಈಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ” ಎಂದರು. ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಚಾಲಕರಿಗೆ ಸ್ಪೂರ್ತಿ ನೀಡುವ ಹಾಡೊಂದನ್ನು ಹಾಡಿದ್ದಾರೆ. ಅಹಲ್ಯಾ ಸುರೇಶ್ ಹಾಗೂ ಸ್ನೇಹಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಂಟೇಜ್ ಫಿಲಂಸ್ ಮೂಲಕ‌ ನವೀನ್ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here