ಸರಣಿ ಚಿತ್ರದ ಶೀರ್ಷಿಕೆ – ‘ಶಿವಾಜಿ ಸೂರತ್ಕಲ್, ದಿ ಮಿಸ್ಟೀರಿಯಸ್ ಕೇಸ್ ಆಫ್‌ ಮಾಯಾವಿ’. ಯಾರು ಈ ಮಾಯಾವಿ? ಶಿವಾಜಿ ತನಗೆ ಎದುರಾದ ಮತ್ತೊಂದು ವಿಚಿತ್ರ ಪ್ರಕರಣವನ್ನು ಹೇಗೆ ಪರಿಹರಿಸುತ್ತಾರೆ ಎಂಬುದೇ ಈ ಸಿನಿಮಾದ ಮೂಲ ಕಥೆ.

ರಮೇಶ್‌ ಅರವಿಂದ್‌ ನಟನೆಯಲ್ಲಿ 2020ರಲ್ಲಿ ತೆರೆಕಂಡ ‘ಶಿವಾಜಿ ಸೂರತ್ಕಲ್’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಈಗ ಶಿವಾಜಿ ಮತ್ತೆ ಬರುತ್ತಿದ್ದಾರೆ, ಮತ್ತೊಂದು ಕೇಸ್‌ನೊಂದಿಗೆ. ಚಿತ್ರದ ಶೀರ್ಷಿಕೆ – “ಶಿವಾಜಿ ಸೂರತ್ಕಲ್, ದಿ ಮಿಸ್ಟೀರಿಯಸ್ ಕೇಸ್ ಆಫ್‌ ಮಾಯಾವಿ’. ಯಾರು ಈ ಮಾಯಾವಿ? ಶಿವಾಜಿ ತನಗೆ ಎದುರಾದ ಮತ್ತೊಂದು ವಿಚಿತ್ರ ಪ್ರಕರಣವನ್ನು ಹೇಗೆ ಪರಿಹರಿಸುತ್ತಾರೆ ಎಂಬುದೇ ಈ ಸಿನಿಮಾದ ಮೂಲ ಕಥೆ. ಈ ಬಾರಿ ಸರಣಿ ಚಿತ್ರದಲ್ಲಿ ಪ್ರೇಕ್ಷಕರು ಶಿವಾಜಿ ಖಾಸಗಿ ಜೀವನವನ್ನು ಮತ್ತಷ್ಟು ಹತ್ತಿರದಿಂದ ನೋಡಲಿದ್ದಾರೆ. ಚಿತ್ರವೂ ಮೂರು ಕಾಲಘಟ್ಟಗಳನ್ನು ಒಳಗೊಂಡಿದ್ದು, ಮೂರು ತಲೆಮಾರುಗಳನ್ನು ಒಟ್ಟಿಗೆ ತರಲಿದೆ.

ಶಿವಾಜಿ ತಂದೆ ವಿಜೇಂದ್ರ ಸೂರತ್ಕಲ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರವನ್ನು ಹಿರಿಯ ನಟ ನಾಜರ್ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಶಿವಾಜಿಯ ಮಗಳಾಗಿ ಸಿರಿ ಸೂರತ್ಕಲ್ ಇರುತ್ತಾಳೆ. ಶಿವಾಜಿ ಅವಳನ್ನು ಮುದ್ದಿನಿಂದ ಚುಕ್ಕಿ ಎನ್ನುತ್ತಾರೆ. ಆ ಮುದ್ದು ಮಗಳ ಹಿಂದೆಯೂ ಒಂದು ಕತೆ ಇರಲಿದೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. 21 ದಿನಗಳ ಚಿತ್ರೀಕರಣ ಮುಗಿಸಿ ತಂಡ ಬೆಂಗಳೂರಿಗೆ ಮರಳಿದೆ. ಇನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮುಂದುವರಿಯುತ್ತದೆ. ರಮೇಶ್ ಅರವಿಂದ್ ಶಿವಾಜಿ, ರಾಘು ರಮಣಕೊಪ್ಪ ಹಾಗೂ ರಾಧಿಕಾ ನಾರಾಯಣ್ ಅವರು ಮೊದಲ ಚಿತ್ರದಲ್ಲಿ ಕಾಣಿಸಿಕೊಂಡ ಪಾತ್ರಗಳಲ್ಲಿ ಮತ್ತೆ ನಿಮ್ಮ ಮುಂದೆ ಬರಲಿದ್ದಾರೆ. ಹೊಸ ತಾರಾಗಣದಲ್ಲಿ ಮೇಘನಾ ಗಾಂವ್ಕರ್ ಅವರು ಡಿಸಿಪಿ ದೀಪಾ ಕಾಮತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಯುವ ಕಲಾವಿದ ಸುಮಂತ್ ಭಟ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೃಷ್ಟಿ ಶೆಟ್ಟಿ ಹಾಗೂ ಮಧುರಾ ಗೌಡ ಈ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ತಾಂತ್ರಿಕ ವರ್ಗಕ್ಕೆ ಬಂದರೆ, ಡೇಟ್ಸ್ ಕಾರಣದಿಂದಾಗಿ, ಚಿತ್ರದ ಛಾಯಾಗ್ರಹಣವನ್ನು ದರ್ಶನ್ ಅಂಬಟ್ ವಹಿಸಿಕೊಂಡಿದ್ದಾರೆ. ಇವರು ಬಹುದೊಡ್ಡ ಛಾಯಾಗ್ರಾಹಕ ಮಧು ಅಂಬಟ್ ಅವರ ಮಗ. ಈಗಾಗಲೇ ಕೆಲವು ಮಲಯಾಳಂ ಹಾಗೂ ತೆಲುಗು ಚಿತ್ರಗಳಿಗೆ ಕ್ಯಾಮರಾ ಹಿಡಿದಿರುವ ಇವರು, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸುತ್ತಿರುವ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಚಿತ್ರಕಥೆ, ನಿರ್ದೇಶನವಿದೆ.

LEAVE A REPLY

Connect with

Please enter your comment!
Please enter your name here