ನಟ ಪುನೀತ್ ರಾಜಕುಮಾರ್‌ ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್‌ ಮತ್ತು ಪಿಆರ್‌ಕೆ ಆಡಿಯೋ ಮೂಲಕ ಉತ್ಸಾಹಿ ಸಿನಿಮಾಸಕ್ತರ ಬೆನ್ನಿಗೆ ನಿಂತಿದ್ದರು. ಪುನೀತ್ ಕಾಲವಾದ ವಾರಗಳ ನಂತರ ಪಿಆರ್‌ಕೆ ವತಿಯಿಂದ ಪತ್ರವೊಂದು ರಿಲೀಸ್ ಆಗಿದೆ. ಅವರ ಆಶಯಗಳನ್ನು ಜೀವಂತವಾಗಿಡುವ, ಮುಂದುವರೆಸುವ ನಿಟ್ಟಿನಲ್ಲಿ ಸಂಸ್ಥೆ ಸಹಕಾರ ಕೋರಿದೆ.

ನಟ ಪುನೀತ್ ರಾಜಕುಮಾರ್ ಅಗಲಿಕೆಯಿಂದಾಗಿ ಕನ್ನಡ ಚಿತ್ರರಂಗದಲ್ಲಿ ಒಂದ ನಿರ್ವಾತ ಸೃಷ್ಟಿಯಾಗಿರುವುದು ದಿಟ. ನಟನಾಗಿ ಎಲ್ಲರಿಗೂ ಹತ್ತಿರವಾಗಿದ್ದ ಪುನೀತ್‌ ಕೆಲವು ವರ್ಷಗಳಿಂದೀಚೆಗೆ ‘ಪಿಆರ್‌ಕೆ’ ಆಡಿಯೋ ಮತ್ತು ಪ್ರೊಡಕ್ಷನ್ಸ್‌ ಮೂಲಕ ಹೊಸಬರನ್ನು ಪ್ರೋತ್ಸಾಹಿಸುವ ಮಾದರಿಯ ಹಾದಿಯಲ್ಲಿ ನಡೆದಿದ್ದರು. ಅವರ ಬ್ಯಾನರ್‌ನಡಿ ಕೆಲವು ಸಿನಿಮಾಗಳು ತಯಾರಾದವು. ಯುವ ಉತ್ಸಾಹಿ ಸಿನಿಮಾಸಕ್ತರಿಗೆ ಅವರೊಂದು ಭರವಸೆಯಾಗಿದ್ದರು. ತಮ್ಮ ಪ್ರೊಡಕ್ಷನ್ಸ್‌ ಹೌಸ್‌ ಮೂಲಕ ಅಪರೂಪದ ಕತೆಗಳನ್ನು ತೆರೆಗೆ ತರುವ ತವಕ ಅವರಲ್ಲಿತ್ತು. ಈ ಬಗ್ಗೆ ಸಾಕಷ್ಟು ಕೆಲಸಗಳನ್ನು ನಡೆಸಿದ್ದರು. ಇದಕ್ಕೆ ಸೂಕ್ತ ಕ್ರಿಯಾಯೋಜನೆಯೂ ರೂಪುಗೊಂಡಿತ್ತು. ಅಷ್ಟರಲ್ಲಿ ಅವರು ಅಕಾಲಿಕವಾಗಿ ಅಗಲಿದರು. ಅಪ್ಪು ಅಗಲಿ ವಾರಗಳಾದವು. ಇಂದು ‘ಪಿಆರ್‌ಕೆ’ಯಿಂದ ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದು ಬಿಡುಗಡೆಯಾಗಿದೆ. “ಪುನೀತ್ ಆಶಯಗಳನ್ನು ಮುಂದುವರೆಸುವ, ಆ ಮೂಲಕ ಅವರ ಕನಸುಗಳನ್ನು ನನಸಾಗಿಸಲು ಬೆಂಬಲವಿರಲಿ” ಎನ್ನುವ ಒಕ್ಕಣಿ ರಿಲೀಸ್ ಆಗಿದೆ. ಸದ್ಯಕ್ಕೆ ಇಷ್ಟು ಮಾಹಿತಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಸಿಗಬಹುದು.

LEAVE A REPLY

Connect with

Please enter your comment!
Please enter your name here