ವೈಲ್ಡ್ ಕಾರ್ಡ್ ಎಂಟ್ರಿಯ ನಂತರ ಟಫ್ ಟಾಸ್ಕ್ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್ಗಳು ಎದುರಾಗುತ್ತಿವೆ. ಇಂಥದೊಂದು ಟಾಸ್ಕ್ನ ಝಲಕ್ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಸಿಕ್ಕಿದೆ.
ಬಿಗ್ಬಾಸ್ ಮನೆಗೆ ಪವಿ ಮತ್ತುಅವಿನಾಶ್ ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ ಹೊಸದೊಂದು ಗಾಳಿ ಬೀಸುತ್ತಿದೆ. ಹೊಸ ಸ್ಪರ್ಧಿಗಳ ಜೊತೆಗಿನ ಒಡನಾಟ, ಮನೆಯೊಳಗಿನ ಗುಂಪುಗಳ ಸಮತೋಲವನ್ನು ತಪ್ಪಿಸುತ್ತಿದೆ. ಟಾಸ್ಕ್ಗಳನ್ನು ದಿಕ್ಕು ದೆಸೆಗಳನ್ನು ಬದಲಿಸುತ್ತಿದೆ. ಅಷ್ಟೇ ಅಲ್ಲ, ಟಫ್ ಟಾಸ್ಕ್ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್ಗಳು ಎದುರಾಗುತ್ತಿವೆ. ಇಂಥದೊಂದು ಟಾಸ್ಕ್ನ ಝಲಕ್ JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಸಿಕ್ಕಿದೆ. ತುಕಾಲಿ ಸಂತೋಷ್ ಮತ್ತು ಮೈಕಲ್ ಇಬ್ಬರೂ ಕೇಕ್ ತಿನ್ನುತ್ತಿದ್ದಾರೆ. ಯಾರು ಮೊದಲು ತಿಂದು ತಮ್ಮ ತಲೆಮೇಲೆ ಕಟ್ಟಿಕೊಂಡಿರುವ ಗಂಟೆಯನ್ನು ಬಾರಿಸುತ್ತಾರೋ ಅವರಿಗೆ ಪ್ರಶ್ನೆ ಕೇಳುವ ಅಧಿಕಾರ ಸಿಗುತ್ತದೆ.
ಈ ಆಟದಲ್ಲಿ ಮೈಕಲ್ ಮೊದಲು ಕೇಕ್ ತಿಂದು ತಲೆಮೇಲಿನ ಗಂಟೆ ಬಾರಿಸಿದ್ದಾರೆ. ಅವರ ಮೊದಲ ಪ್ರಶ್ನೆ ಹೀಗಿತ್ತು: ‘ಯಾರ ಜನ್ಮದಿನವನ್ನು ಮಕ್ಕಳ ಜನ್ಮದಿನಾಚರಣೆಯನ್ನಾಗಿ ಆಚರಿಸುತ್ತಾರೆ?’ ಇಷ್ಟು ಸುಲಭದ ಪ್ರಶ್ನೆಗೆ ಅಷ್ಟೇ ಉತ್ಸಾಹದಿಂದ ಎದ್ದುನಿಂತ ಅವಿನಾಶ್ ಶೆಟ್ಟಿ, ‘ನವೆಂಬರ್ 14’ ಎಂದು ಕಿರುಚಿದ್ದಾರೆ! ಪ್ರಶ್ನೆಯನ್ನೇ ಅರ್ಥಮಾಡಿಕೊಳ್ಳುವ ವ್ಯವಧಾನ ಇಲ್ಲದವರು ಸರಿಯಾದ ಉತ್ತರ ಕೊಡಲು ಹೇಗೆ ಸಾಧ್ಯ? ಎರಡನೇ ಪ್ರಶ್ನೆ ಇನ್ನೂ ಸುಲಭವಾಗಿತ್ತು… ‘ಕನ್ನಡ ವರ್ಣಮಾಲೆಯಲ್ಲಿ ಒಟ್ಟೂ ಎಷ್ಟು ಅಕ್ಷರಗಳಿವೆ?’ ಈ ಪ್ರಶ್ನೆಗೆ ಯಾರಾದರೂ ಉತ್ತರಿಸಿದರಾ? ಇಂದು ಪ್ರಸಾರವಾಗುವ ಬಿಗ್ಬಾಸ್ ಸಂಚಿಕೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ.