ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗುತ್ತಿದೆ ‘ರೇಸರ್‌’. ಭರತ್‌ ವಿಷ್ಣುಕಾಂತ್‌ ನಿರ್ದೇಶನದ ಚಿತ್ರದ ಬಹಳಷ್ಟು ಸನ್ನಿವೇಶಗಳಲ್ಲಿ ಬೈಕ್‌ ರೇಸಿಂಗ್‌ ಇರಲಿದೆ. ಇದಕ್ಕಾಗಿ ನಾಯಕಿ ಅಕ್ಷಿತಾ ಬೈಕ್‌ ಕಲಿತಿದ್ದಾರೆ. ಇದೀಗ ಅವರ ಪಾತ್ರ ಪರಿಚಯಿಸುವ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಮೂಲತಃ ಮಾಡೆಲ್‌ ಆದ ಅಕ್ಷಿತಾ ಸತ್ಯನಾರಾಯಣ್‌ ಕನ್ನಡತಿ. 2020ರ VK ನವತಾರೆ ಕಾಂಟೆಸ್ಟ್‌ ಗೆದ್ದ ಅವರು ಮೊದಲು ಕ್ಯಾಮೆರಾ ಎದುರಿಸಿದ್ದು ತೆಲುಗು ಸೀರಿಯಲ್‌ಗೆ. ಈಗ ‘ರೇಸರ್‌’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಭರತ್ ವಿಷ್ಣುಕಾಂತ್ ನಿರ್ದೇಶನದ ಈ ಸಿನಿಮಾಗೆ ಬೈಕ್‌ ರೇಸಿಂಗ್‌ ಹಿನ್ನೆಲೆಯಲ್ಲಿ ಕತೆ ಹೆಣೆಯಲಾಗಿದೆ. ನೈಜ ಘಟನೆ ಚಿತ್ರಕ್ಕೆ ಸ್ಫೂರ್ತಿ. ಗ್ಯಾರೇಜ್‌ವೊಂದರಲ್ಲಿ ನಡೆದ ಘಟನೆಯ ಪ್ರೇರಣೆಯಿಂದ ಸಿನಿಮಾಗೆ ಹೊಂದುವಂತೆ ಚಿತ್ರಕಥೆ ಹೆಣೆಯಲಾಗಿದೆ. ತಮ್ಮ ಪಾತ್ರಕ್ಕಾಗಿ ಅಕ್ಷಿತಾ ಬೈಕ್‌ ಕಲಿತಿದ್ದಾರೆ. ಅವರ ಪಾತ್ರ ಪರಿಚಯಿಸುವ ಮೋಷನ್‌ ಪೋಸ್ಟರ್‌ ವೀಡಿಯೋ ಬಿಡುಗಡೆಯಾಗಿದೆ.

ಜನವರಿಯಲ್ಲಿ ಸೆಟ್ಟೇರಿದ್ದ ಚಿತ್ರದ ಶೇ 35ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ತಿಂಗಳಾತ್ಯಂತಕ್ಕೆ ಹಾಡುಗಳ ಚಿತ್ರೀಕರಣ ಶುರು. ಚಿತ್ರದ ‘ಭಾಯ್’ ಎಂಬ ದೊಡ್ಡ ಪಾತ್ರಕ್ಕಾಗಿ ಮಲಯಾಳಂ, ಕನ್ನಡದ ಇಬ್ಬರು ದೊಡ್ಡ ನಟರನ್ನು ನಿರ್ದೇಶಕರು ಅಪ್ರೋಚ್ ಮಾಡಿದ್ದಾರಂತೆ. ಸಂದೇಶ್ ಪ್ರಸನ್ನ ಅವರು ಚಿತ್ರದ ಹೀರೋ. ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಭರತ್ ವಿಷ್ಣುಕಾಂತ್ ನಿರ್ದೇಶನದ ಜೊತೆಗೆ ಭರತ್ ಫಿಲಂಸ್ ನಡಿ ತಾವೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Previous article‘ದೇವರ ಆಟ ಬಲ್ಲವರಾರು?’ | ದಾಖಲೆಯ ‘ತಿಂಗಳ ಸಿನಿಮಾ’ ಯೋಜನೆ
Next articleಟಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ರಾಕೇಶ್‌ ಮಾಸ್ಟರ್‌ ನಿಧನ

LEAVE A REPLY

Connect with

Please enter your comment!
Please enter your name here