ಲಿಂಗರಾಜ ಉಚ್ಚಂಗಿದುರ್ಗ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ರಾಜಯೋಗ’ ಸಿನಿಮಾ 25 ದಿನಗಳ ಸಂಭ್ರಮದಲ್ಲಿದೆ. ಧರ್ಮಣ್ಣ ಕಡೂರು, ನಿರೀಕ್ಷಾ, ನಾಗೇಂದ್ರ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಶಿಷ್ಟ ಕಥಾಹಂದರದ ಚಿತ್ರವಿದು.

ಧರ್ಮಣ್ಣ ಕಡೂರು ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ರಾಜಯೋಗ’ ಚಿತ್ರವೀಗ ಯಶಸ್ವೀ 25 ದಿನಗಳನ್ನು ಪೂರೈಸಿದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗ IAS ಅಧಿಕಾರಿಯಾಗುವ ಮೂಲಕ ಇಡೀ ಹಳ್ಳಿಗೇ ಕೀರ್ತಿ ತರುವ ಕಥೆ ಹೊಂದಿರುವ ಈ ಚಿತ್ರಕ್ಕೆ ರಾಜ್ಯಾದ್ಯಂತ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ನಿರೀಕ್ಷಿಸಿದ ಗಳಿಕೆ ಬರುತ್ತಿಲ್ಲ. ಆದರೂ ನಮ್ಮ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರಲ್ಲ ಎನ್ನುವ ಧನ್ಯತಾಭಾವ ಚಿತ್ರತಂಡಕ್ಕಿದೆ. ನಿರ್ಮಾಪಕ‌ ಕುಮಾರ ಕಂಠೀರವ ಈ ಕುರಿತು ‘ಕಾಂಪಿಟೇಶನ್ ನಡುವೆ ಹೋಪ್ ಇಟ್ಟುಕೊಂಡು ಚಿತ್ರವನ್ನು ಬಿಡುಗಡೆ ಮಾಡಿದ್ದೆವು. ಪತ್ರಕರ್ತರು ಚಿತ್ರವನ್ನು ಮೆಚ್ಚಿಕೊಂಡಾಗ ನಾವು ಗದ್ದೆವು ಅನಿಸಿತ್ತು. ಸಂಕಷ್ಟಗಳನ್ನು ಎದುರಿಸಿ ಸಿನಿಮಾನ ನಿಲ್ಲಿಸಿದೆವು. ಕೂತಿರುವಷ್ಟು ವೇಳೆ ಜನರನ್ನು ಹಿಡಿದು ಕೂರಿಸುವ ಶಕ್ತಿ ನಮ್ಮ ಚಿತ್ರಕ್ಕಿತ್ತು. ಪೂರ್ತಿ ಗೆದ್ದಿಲ್ಲ. ಆದರೆ ಒಳ್ಳೆ ಸಿನಿಮಾ ಮಾಡಿದ ತೃಪ್ತಿಯಿದೆ’ ಎನ್ನುತ್ತಾರೆ.

ಲಿಂಗರಾಜ ಉಚ್ಚಂಗಿದುರ್ಗ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು Sri Ramaratna Productions ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆ ಎನ್ ನೀರಜ್ ಗೌಡ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಕ್ಷಯ್ ರಿಶಭ್ ಸಂಗೀತ, ವಿಷ್ಣುಪ್ರಸಾದ್ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಸಂಕಲನವಿದೆ. ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವತ್ತಾರ್‌, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here