‘ತೂತು ಮಡಿಕೆ’ ಸಿನಿಮಾಗೆ ವಿಜಯ ಪ್ರಕಾಶ್‌ ಹಾಡಿರುವ ‘ಯಾಮಾರಿದೆ ಹೃದಯ’ ರೊಮ್ಯಾಂಟಿಕ್‌ ಸಾಂಗ್‌ ರಿಲೀಸ್‌ ಆಗಿದೆ. ಚಂದ್ರ ಕೀರ್ತಿ ನಟಿಸಿ, ನಿರ್ದೇಶಿಸಿರುವ ಚಿತ್ರದ ನಾಯಕಿ ಪಾವನಾ.

ಮುಹೂರ್ತದ ದಿನದಂದೇ ಶೀರ್ಷಿಕೆ ಮೂಲಕ ಗಮನ ಸೆಳೆದಿತ್ತು ‘ತೂತು ಮಡಿಕೆ’ ಸಿನಿಮಾ. ಇದೀಗ ಚಿತ್ರದ ರೊಮ್ಯಾಂಟಿಕ್‌ ಹಾಡೊಂದು ರಿಲೀಸ್‌ ಆಗಿದೆ. ಚೇತನ್‌ ಕುಮಾರ್‌ ರಚನೆಯ ‘ಯಾಮಾರಿದೆ ಹೃದಯ’ ಗೀತೆಗೆ ಸ್ವಾಮಿನಾಥನ್‌ ಆರ್‌.ಕೆ.ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಪ್ರಕಾಶ್‌ ಹಾಡಿರುವ ಹಾಡು ಮೇಕಿಂಗ್‌ನಿಂದ ಇಷ್ಟವಾಗುವಂತಿದೆ. ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗಿ ‘ಮೂಕವಿಸ್ಮಿತ’, ‘ಸಿಲಿಕಾನ್ ಸಿಟಿ’, ‘ಕಿಸ್’ ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಚಂದ್ರ ಕೀರ್ತಿ ‘ತೂತು ಮಡಿಕೆ’ ಸಿನಿಮಾದ ನಾಯಕ. ಸಿನಿಮಾಗೆ ಕತೆ ರಚಿಸಿರುವ ಅವರು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಾಯಕಿಯಾಗಿ ಪಾವನಿ ನಟಿಸಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾಮಿಡಿ ಥ್ರಿಲ್ಲರ್ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್‌ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

Previous articleಓವರ್‌ ಸೀಸ್‌ ಮಾರುಕಟ್ಟೆಯಲ್ಲಿ ದಾಖಲೆಯ ಮೊತ್ತಕ್ಕೆ ಬಿಕರಿಯಾದ ‘ವಿಕ್ರಾಂತ್‌ ರೋಣ’
Next articleF3 ಟ್ರೈಲರ್‌; ಬಹುನಿರೀಕ್ಷಿತ ತೆಲುಗ ಸಿನಿಮಾ ಮೇ 27ಕ್ಕೆ ರಿಲೀಸ್‌

LEAVE A REPLY

Connect with

Please enter your comment!
Please enter your name here