ಗಾಯಕ, ಸಂಗೀತ ಸಂಯೋಜಕ ಬಾದ್‌ಷಾ ‘ತಬಾಹಿ’ ವೀಡಿಯೋ ಆಲ್ಬಂ ಸಾಂಗ್‌ನೊಂದಿಗೆ ಮರಳಿದ್ದಾರೆ. ಈ ಸಾಂಗ್‌ನಲ್ಲಿ ಬಾದ್‌ಷಾ ಜೊತೆ ನಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಾಂಗ್‌ ಸದ್ದು ಮಾಡುತ್ತಿದೆ.

ಗಾಯಕ, ಸಂಗೀತ ಸಂಯೋಜಕ, rapper ಬಾದ್‌ಷಾ ಯುವ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದಾರೆ. ಈಗ ಬಿಡುಗಡೆಯಾಗಿರುವ ಅವರ ನೂತನ ವೀಡಿಯೊ ಆಲ್ಬಂ ಸಾಂಗ್‌ ‘ತಬಾಹಿ’ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಟಿ ತಮನ್ನಾ ಭಾಟಿಯಾ ಈ ವೀಡಿಯೋದ ಪ್ರಮುಖ ಆಕರ್ಷಣೆ. fast-paced ಟ್ರ್ಯಾಕ್‌, ಟೆಕ್ನೋ ಬೀಟ್ಸ್‌ನೊಂದಿಗೆ ಬಾಲಿವುಡ್‌ನ cabaret eraವನ್ನು ನೆನಪು ಮಾಡಿದ್ದಾರೆ ಬಾದ್‌ಷಾ. ಪ್ರತೀ ಮ್ಯೂಸಿಕ್‌ ವೀಡಿಯೋಗಳಲ್ಲಿ ಅವರು ತಮ್ಮ ಡ್ಯಾನ್ಸ್‌ ಪ್ರತಿಭೆಯನ್ನು ಶೋಕೇಸ್‌ ಮಾಡುತ್ತಿದ್ದು, ‘ತಬಾಹಿ’ಯಲ್ಲೂ ನೃತ್ಯದಲ್ಲಿ ಮಿಂಚಿದ್ದಾರೆ. ಅವರೊಂದಿಗೆ ಸುಂದರಿ ತಮನ್ನಾ ಹೆಜ್ಜೆ ಹಾಕಿದ್ದಾರೆ. ಬಾದ್‌ಷಾರ ಇತ್ತೀಚಿನ ವೀಡಿಯೋ ಆಲ್ಬಂಗಳಾದ ‘ಜುಗ್ನೂ’, ‘ಪಾನಿ ಪಾನಿ’, ‘ಗೆಂಡಾ ಫೂಲ್‌’ ಕೂಡ ಯಶಸ್ವಿಯಾಗಿದ್ದವು.

Previous articleಮಹಿಳಾ ದಿನ; ಸ್ತ್ರೀ ಪಾತ್ರಗಳ ಫಸ್ಟ್‌ಲುಕ್‌ ರಿವೀಲ್‌ ಮಾಡಿದ ನೆಟ್‌ಫ್ಲಿಕ್ಸ್‌
Next articleBiffes | ಅನಿಮೇಷನ್‌ ಚಿತ್ರ ಪ್ರದರ್ಶನದಲ್ಲಿ ಧರ್ಮಗುರುಗಳ ಉಪಸ್ಥಿತಿ

LEAVE A REPLY

Connect with

Please enter your comment!
Please enter your name here